ದಾವಣಗೆರೆ, ಮಾ. 21 – ಈಚೆಗೆ ನಡೆದ ಗ್ರಾಮ ಪಂಚಾಯಿತಿ ಮತ್ತು ಸಹಕಾರ ಸಂಘಗಳ ಚುನಾವಣೆ ಗಳಲ್ಲಿ ಆಯ್ಕೆಯಾಗಿರುವ ಕಮ್ಮವಾರಿ ಸಮಾಜದ ಸದಸ್ಯರುಗಳನ್ನು ನಗರದ ಕಮ್ಮವಾರಿ ಸಮಾಜ ಸಂಘ ದಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಮ್ಮವಾರಿ ಸಮುದಾಯ ಭವನದಲ್ಲಿ ಸಮಾಜದ ಅಧ್ಯಕ್ಷ ವಲ್ಲೂರಿ ವೆಂಕಟರಾವ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಸದಸ್ಯರನ್ನು ಸನ್ಮಾನಿ ಸಲಾಯಿತು. ಡಾ|| ವೆಂಕಟ ರಾಮಾಂಜನೇಯ ಸ್ವಾಮಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯದರ್ಶಿ ಕೊಲ್ಲಿ ವೆಂಕಟೇಶ್ವರರಾವ್ ಕಾರ್ಯಕ್ರಮವನ್ನು ನಿರ್ವಹಿಸಿದರು.
January 1, 2025