ಪಾಲಿಕೆಯ ಉಪಮೇಯರ್‌ ಶಿಲ್ಪಾ ಅವರಿಗೆ ಸನ್ಮಾನ

ದಾವಣಗೆರೆ, ಮಾ. 21 – ಮಹಾನಗರ ಪಾಲಿಕೆ ಉಪ ಮಹಾಪೌರರಾಗಿ ಆಯ್ಕೆಯಾಗಿರುವ ಶ್ರೀಮತಿ ಶಿಲ್ಪಾ ಜಯಪ್ರಕಾಶ್‌ ಅವರನ್ನು ನಗರ ಪಡಿತರ ವಿತರಕರ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ಗೌರವಾಧ್ಯಕ್ಷ ಬಿ.ವಿ. ಚಂದ್ರಶೇಖರ್‌ ಮತ್ತು  ಅಧ್ಯಕ್ಷ ವೆಂಕಟೇಶ್‌ ನಾಯ್ಕ ಅವರುಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎಂ.ಎನ್. ನಾಗರಾಜ್‌, ಉಪಾಧ್ಯಕ್ಷ ಇ. ಬಸವರಾಜ್‌, ರವಿ ಭುವನೇಶ್ವರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!