ಪತಿಯ ಶವವನ್ನು ಶೌಚಾಲಯದ ಗುಂಡಿಯಲ್ಲಿ ಮುಚ್ಚಿದ ಪತ್ನಿ: ಜೀವಾವಧಿ ಶಿಕ್ಷೆ

ದಾವಣಗೆರೆ, ಮಾ.19- ಮದ್ಯವ್ಯಸನಿಯಾಗಿದ್ದ ಪತಿಯ ಹಿಂಸೆ ತಾಳಲಾರದೇ ಆತನನ್ನು ಹತ್ಯೆಗೈದಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ದಂಡ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.

ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದ ವಾಸಿ ರೇಣುಕಾ ಶಿಕ್ಷೆಗೆ ಗುರಿಯಾದ ಪತ್ನಿ.

ಮೃತ ಪತಿ ಬಂಗಿ ನರಸಿಂಹಪ್ಪ ಯಾವುದೇ ಕೆಲಸ ಮಾಡದೇ ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡು ತ್ತಿದ್ದ. ಅಲ್ಲದೇ ಕುಡಿಯಲು ಹಣ ಕೊಡುವಂತೆ ತನ್ನ ಪತ್ನಿ ರೇಣುಕಾಳಿಗೆ ಪೀಡಿಸುತ್ತಿದ್ದ. ಹಣ ಕೊಡದೇ ಇದ್ದಲ್ಲಿ ಹೊಡಿ – ಬಡಿ ಮಾಡಿ ಹಿಂಸೆ ನೀಡುತ್ತಿದ್ದ. ಇದರಿಂದ ತುಂಬಾ ರೋಸಿ ಹೋಗಿದ್ದ ರೇಣುಕಾ ತನ್ನ ಗಂಡನ ಹಿಂಸೆಯಿಂದ ಪಾರಾಗಲು ಆತನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಳು. ಅದರಂತೆ ಏಪ್ರಿಲ್ 8, 2018 ರಂದು ರಾತ್ರಿ ಬಂಗಿ ನರಸಿಂಹಪ್ಪನು ಪಾನಮತ್ತನಾಗಿ ಮನೆಗೆ ಬಂದು ಕುಡಿಯಲು ಹಣ ಕೊಡುವಂತೆ ಪೀಡಿಸಿ ಹೊಡೆಯಲು ಹೋದಾಗ ರೇಣುಕಾ ಈತನ ಕುತ್ತಿಗೆ ಯನ್ನು ಬಲವಾಗಿ ಹಿಡಿದು ಮನೆಯ ಹಿತ್ತಲಿನ ಶೌಚಾಲ ಯದ ರೂಮಿನೊಳಗೆ ಎಳೆದುಕೊಂಡು ಹೋಗಿ ಕೆಳಗಡೆ ಕೆಡವಿ ಹರಿತವಾದ ಕಬ್ಬಿಣದ ಕುಡುಗೋಲಿನಿಂದ ಕುತ್ತಿಗೆ ಯನ್ನು ಬಲವಾಗಿ ಕೊಯ್ದು ಕೊಲೆ ಮಾಡಿ, ಹೆಣವನ್ನು ಅಲ್ಲೇ ಪಕ್ಕದಲ್ಲಿರುವ ಶೌಚಾಲಯದ ಗುಂಡಿಯೊಳಗೆ ಹಾಕಿ ಗುಂಡಿಯ ಮೇಲೆ ಕಲ್ಲು ಚಪ್ಪಡಿಗಳನ್ನು ಹಾಕಿ ಕೊಲೆ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಳು. 

ಈ ಪ್ರಕರಣವು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಹೊನ್ನಾಳಿ ವೃತ್ತ ಸಿಪಿಐ ಜೆ. ರಮೇಶ್ ತನಿಖೆ ನಡೆಸಿ, ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಆರೋಪಿ ವಿರುದ್ದ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿ ರೇಣುಕಾಳಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾ ಲಯದ ನ್ಯಾಯಾಧೀಶರಾದ ಕೆ.ಬಿ. ಗೀತಾ ಇಂದು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿ ಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದ್ದರು.

error: Content is protected !!