ಮನೆಯಂಗಳದಲ್ಲಿನ ಗುಬ್ಬಚ್ಚಿಗಳು ಹಾಗೂ ಇನ್ನಿತರೆ ಪಕ್ಷಿಗಳ ಬಗೆಗೆ ಜನ ಜಾಗೃತಿ ಉಂಟು ಮಾಡಿ ಅವುಗಳ ಸಂಕುಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪ್ರಯತ್ನವಾಗಿ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ. ಭಾರತದ ನೇಚರ್ ಫಾರೆವರ್ ಸೂಸೈಟಿಯ ಪ್ರಮುಖ ಆಸಕ್ತಿಯ ಮೇರೆಗೆ ಪ್ರಾರಂಭಗೊಂಡಿರುವ ಈ ಆಚರಣೆ ಫ್ರಾನ್ಸಿನ ಇಕೋ-ಸಿಸ್ ಫೌಂಡೇಶನ್ ವಿಶ್ವದ ಅನೇಕ ಸಂಸ್ಥೆಗಳ ಸಹಯೋಗ ನೀಡಿದೇ ಸಂಸ್ಥೆ ನಿರ್ಮಾತೃ ಮೊಹಮ್ಮದ್ ದಿಲ್ವಾರ್ ಅವರು 2010 ರಲ್ಲಿ ಗುಬ್ಬಚ್ಚಿಗಳ ದಿನವನ್ನು ಜಗತ್ತಿಗೆ ಪರಿಚಯಿಸಿದರು.
ಎಲ್ಲಿ ಹೋದವು ಮುದ್ದು ಗುಬ್ಬಚ್ಚಿಗಳು….?
ಮನುಷ್ಯನ ಸಾಂಗತ್ಯದಲ್ಲೇ ಬದುಕಲು ಬಯಸುತಿದ್ದ ಗುಬ್ಬಿಗಳು ಗೂಡು ಕಟ್ಟುತ್ತಿದ್ದ ಮನೆಯ ಮಹಡಿ ಮೇಲೆ ಸಂದಿಗೊಂದಿಗಳಲ್ಲಿ ಸದಾ ಮನೆಯಲ್ಲೇ ಕೂತು ಹೊರಗೆಲ್ಲೂ ಸುತ್ತದವರಿಗೆ `ಮನೆಗುಬ್ಬ’ಎಂಬ ಉಪಮೇಯ ಈಗಲೂ ಚಾಲ್ತಿಯಲ್ಲಿದೆ. ಅಂದರೆ ಅಷ್ಟರ ಮಟ್ಟಿಗೆ ಗುಬ್ಬಚ್ಚಿಗಳು ಮನೆಯ ಸದಸ್ಯರೇ ಆಗಿ ಮನೆಯಲ್ಲುಳಿಯುತ್ತಿದ್ದವು. ಆದರೆ ಇತ್ತೀಚೆಗೆ ಹಳ್ಳಿ ಮನೆಗಳಲ್ಲೂ ಕಾಣಸಿಗದಾಗಿವೆ. ಮೊಬೈಲ್ ತರಂಗಗಳು ಗುಬ್ಬಚ್ಚಿ ಜೀವಕ್ಕೆ ಸಂಚಕಾರ ಎಂಬ ಆತಂಕ ಮುಂತಾದವೆಲ್ಲ ಸೇರಿ ಮುದ್ದು ಗುಬ್ಬಚ್ಚಿಗಳು ಕಣ್ಣಿಗೆ ಕಾಣದಂತೆ ಮಾಯವಾಗಿವೆ. ಇನ್ನಾದರೂ ಗುಬ್ಬಚ್ಚಿಗಳ ಸಂತತಿ ಉಳುವಿಗಾಗಿ ನಾವೆಲ್ಲರೂ ಕೈ ಜೋಡಿಸೋಣ ಆತ್ಮೀಯರೇ.