ಕೊರೊನಾ ರೋಗಿಗಳ ಉಚಿತ ಸೇವೆಯಲ್ಲಿ ಎಸ್ಸೆಸ್ ಹೈಟೆಕ್ ಕಾಲೇಜು ವಿದ್ಯಾರ್ಥಿಗಳು

ದಾವಣಗೆರೆ, ಜೂ. 10- ನಗರದ ಎಸ್. ಎಸ್. ಹೈಟೆಕ್ ಕಾಲೇಜಿನ ಅಂತಿಮ ವರ್ಷದ 130 ವೈದ್ಯಕೀಯ ವಿದ್ಯಾರ್ಥಿಗಳು ರಾಜ್ಯ ದಾದ್ಯಂತ ಹೋಂ ಐಸೋಲೇಷನ್ ನಲ್ಲಿರುವ ಕೋವಿಡ್ ರೋಗಿಗಳಿಗೆ ಮೇ ಮೊದಲನೇ ವಾರದಿಂದ ಉಚಿತ ಟೆಲಿಕನ್ಸಲ್ಟೇಷನ್ ಸೇವೆ ಒದಗಿಸುತ್ತಿದ್ದಾರೆ.

3500ಕ್ಕೊ ಅಧಿಕ ಕೋವಿಡ್ ರೋಗಿಗಳನ್ನು ದೂರವಾಣಿ  ಮುಖಾಂತರ ಸಂಪ ರ್ಕಿಸಿ ಮಾನಸಿಕ ಸ್ಥೈರ್ಯ ಹಾಗೂ ದೈಹಿಕ ರೋಗಕ್ಕೆ ಸೂಕ್ತ ಚಿಕಿತ್ಸೆ- ಸಲಹೆಗಳನ್ನು ನೀಡಿ ಗುಣಮುಖರಾಗಲು ಸಹಕರಿಸಿದ್ದಾರೆ.

ವಿದ್ಯಾರ್ಥಿಗಳ ಈ ಪ್ರಯತ್ನದಿಂದ ಎಸ್. ಎಸ್. ಹೈಟೆಕ್ ಕಾಲೇಜು ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳ ಸೇವೆಯ ರಾಂಕಿಂಗ್ ಪಟ್ಟಿಯಲ್ಲಿ ಟಾಪ್ 5 ಸ್ಥಾನದಲ್ಲಿ ಮುಂದುವರೆಯುತ್ತಾ, ಪ್ರಸ್ತುತ ಎರಡು ವಾರಗಳಿಂದ ಎರಡನೇ ಸ್ಥಾನ ಗಳಿಸುವಲ್ಲಿ ಸಫಲವಾಗಿದೆ. 

ಈ ಕಾರ್ಯಕ್ರಮದ ಯಶಸ್ಸಿಗೆ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯವು ಅಭಿನಂದಿಸಿ ರುವು ದಾಗಿ  ಕಾಲೇಜಿನ ಪ್ರಾಂಶು ಪಾಲ ಡಾ|| ಬಿ. ಎಸ್. ಪ್ರಸಾದ್ ತಿಳಿಸಿದ್ದಾರೆ. 

ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿಗಳು, ವೈದ್ಯರು ಹಾಗೂ ಮಾಸ್ಟರ್ ಟ್ರೇನರ್ಸ್ ಗಳಾದ ಡಾ|| ಎಂ.ಬಸವರಾಜಪ್ಪ, ಡಾ|| ಜಿ. ಎಸ್.ಲತಾ, ಡಾ|| ಜೆ. ಮಂಜುನಾಥ, ಡಾ || ವಿ.ಎಸ್. ಹರೀಶ್ ಕುಮಾರ್, ಡಾ|| ಎನ್. ಮೃತ್ಯುಂಜಯ. ಅವರುಗಳನ್ನು ಕಾಲೇಜಿನ ಛೇರ್ಮನ್ ಶಾಮನೂರು ಮಲ್ಲಿಕಾರ್ಜುನ್, ಕಾಲೇಜಿನ ಪ್ರಾಂಶುಪಾಲ ಡಾ|| ಬಿ.ಎಸ್.ಪ್ರಸಾದ್ ಅಭಿನಂದಿಸಿದ್ದಾರೆ.

error: Content is protected !!