ಹೂವಿನಹಡಗಲಿ, ಮಾ.19- ಲಂಚ ಸ್ವೀಕರಿಸುತ್ತಿದ್ದ ಜೆಸ್ಕಾಂ ಇಂಜಿನಿಯರ್ ಎಸಿಬಿ ಬಲೆಗೆ ಬಿದಿದ್ದಾರೆ. ರೈತರ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಆರ್.ಭಾಸ್ಕರ್ ಅವರು 45 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ 20 ಸಾವಿರ ರೂ. ಹಣವನ್ನು ಕಛೇರಿಯ ತಮ್ಮ ಛೇಂಬರ್ನಲ್ಲಿ ಪಡೆಯುವ ಸಂದರ್ಭದಲ್ಲಿ ಹೊಸಪೇಟೆಯ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ದಾಳಿ ನಡೆಸಿದೆ.
December 26, 2024