ದಾವಣಗೆರೆ, ಮಾ.18- ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಈಚಘಟ್ಟ ಗ್ರಾಮದ ಸರ್ವೆ ನಂಬರ್ 45/1, 45/2 ರ ಕಲ್ಲು ಕ್ವಾರಿಯ ಮೇಲೆ ಮಾ.16 ರಂದು ದಾಳಿಮಾಡಿದ್ದು, ದಾಳಿಯ ಕಾಲಕ್ಕೆ ಈ ಕೆಳಕಂಡ ಸ್ಫೋಟಕ ವಸ್ತುಗಳನ್ನು ಜಫ್ತಿ ಮಾಡಲಾಗಿದೆ.
ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾರ್ಗ ದರ್ಶನದಲ್ಲಿ, ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ನೇತೃತ್ವದಲ್ಲಿ ದಾವಣಗೆರೆ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ. ಮಂಜುನಾಥ,
ಭೂ ವಿಜ್ಞಾನಿ ವಿನಯ್ ಬಣಕಾರ್ ಹಾಗೂ ಆಂಟಿ ಸಬೋಟೇಜ್ ಚೆಕ್ ಟೀಮ್ (ಎಎಸ್‌ಸಿ) ಮತ್ತು
ಸಿಬ್ಬಂದಿ ಯವರಾದ ಮಂಜುನಾಥ, ವಿಶ್ವನಾಥ, ಶ್ರೀನಿವಾಸ, ಅಶೋಕ್‌ರವರ ತಂಡದೊಂದಿಗೆ ಕಾರ್ಯಾಚರಣೆ ಮಾಡಲಾಯಿತು.
60 ಜಿಲೆಟಿನ್‌ಗಳು, ಬಳಸಿರುವ ಒಂದು ಎಲೆಕ್ಟ್ರಾನಿಕ್ (ಇ.ಡಿ.), ಜೀವಂತವಿರುವ ಒಂದು ಇ.ಡಿ., ಸುಮಾರು 100 ಗ್ರಾಂ ತೂಕದ ಗನ್ ಪೌಡರ್, ಬಳಸಿ ತುಂಡಾಗಿರುವ ಸುಮಾರು 7 ಬತ್ತಿ (ಮದ್ದಿರುವ) ಮೂರು ಕಬ್ಬಿಣದ ರಾಡುಗಳು ಕ್ರಮವಾಗಿ 2.1/2 ಅಡಿ, 4 ಅಡಿ, 5 ಅಡಿ ಉದ್ದ ಇರುತ್ತವೆ. ಹಾಗೂ ಒಂದು ಮರದ ಹಿಡಿಕೆ ಇರುವ ಸುತ್ತಿಗೆ ದೊರಕಿದೆ.
ಆರೋಪಿತ ಬಾಲಕೃಷ್ಣ @ ಕಿಟ್ಟಪ್ಪ ಕುರ್ಕಿ ವೆಂಕಟೇಶ್ವರ ಕ್ಯಾಂಪ್ ಗ್ರಾಮದ ವಾಸಿಯಾಗಿದ್ದು, ಈತನನ್ನು ದಸ್ತಗಿರಿ ಮಾಡಿದ್ದು, ಆಪಾದಿತರಾದ ವಿಕ್ರಮ್, ಜಯಪ್ಪ, ರಾಜಪ್ಪ, ಬಸವರಾಜಪ್ಪ ಸಿದ್ದಬಸಪ್ಪ ಅವರ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಾಳಿ ಯನ್ನು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಪ್ರಶಂಶಿಸಿ ಬಹುಮಾನ ಘೋಷಿಸಿರುತ್ತಾರೆ.