ಕ್ರಿಕೆಟ್ ಪ್ಯಾಡ್ ಕಟ್ಟಿಕೊಂಡು ಯುವ ಕಾಂಗ್ರೆಸ್ ಆಕ್ರೋಶ

ಕೊರೊನಾ ಸಂಕಷ್ಟದಲ್ಲಿ ಪೆಟ್ರೋಲ್ ಶತಕದಂಚಿಗೆ

ದಾವಣಗೆರೆ, ಜೂ.6- ಕೊರೊನಾ ಸಂಕಷ್ಟದ ಸಮಯದಲ್ಲಿ ಪೆಟ್ರೋಲ್ ದರ ಶತಕಕ್ಕೆ ದಾಟಿಸಿ, ದೇಶದ ನಿವಾಸಿಗಳಿಗೆ ಪ್ರಧಾನಮಂತ್ರಿ ಅತ್ಯುನ್ನತ ಕೊಡುಗೆ ನೀಡಿದ್ದಾರೆ ಎಂದು ಆಕ್ಷೇಪಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನಗರದಲ್ಲಿ ನಿನ್ನೆ ವಿನೂತನವಾಗಿ ಪ್ರತಿಭಟನೆ ನಡೆಸಿತು.

ಬೂದಾಳ್ ರಸ್ತೆಯ ಪೆಟ್ರೋಲ್ ಬಂಕ್ ಆವರಣದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹಮ್ಮದ್, ಜಿಲ್ಲಾಧ್ಯಕ್ಷ ಸೈಯದ್ ಇರ್ಫಾನ್ ನೇತೃತ್ವದಲ್ಲಿ ಕ್ರಿಕೆಟ್ ಪ್ಯಾಡ್ ಕಟ್ಟಿಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಲಾಯಿತು.

ಯುವ ಕಾಂಗ್ರೆಸ್‌ನ ಸೈಯದ್ ಖಾಲಿದ್ ಅಹಮ್ಮದ್ ಮಾತನಾಡಿ, ಕೊರೊನಾ ಮೊದಲ ಮತ್ತು ಎರಡನೇ ಅಲೆಯ ಹೊಡೆತಕ್ಕೆ ಇಡೀ ಜಗತ್ತೇ ಸಂಕಷ್ಟ ಅನುಭವಿಸುತ್ತಿದೆ. ಅದರಲ್ಲೂ ಭಾರತದಲ್ಲಿ, ಕರ್ನಾಟಕದಲ್ಲಿ ಲಾಕ್‌ಡೌನ್‍ನಿಂದಾಗಿ ಜನರಿಗೆ ಒಂದು ಹೊತ್ತಿನ ಕೂಳಿಗೂ ಪರದಾಡುವ ಸ್ಥಿತಿ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರವನ್ನು ಶತಕದಂಚಿಗೆ ಕೊಂ ಡೊಯ್ದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೈಯದ್ ಇರ್ಫಾನ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ ಮಾತನಾಡಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಗರ್.ಎಲ್.ಎಂ.ಹೆಚ್, ಕಿಸಾನ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಜಿಕ್ರಿಯಾ, ಅಲ್ಪಸಂಖ್ಯಾತರ ಕಾಂಗ್ರೆಸ್ ಮುಖಂಡ ರಿಯಾಜುದ್ದೀನ್, ಯುವ ಮುಖಂಡರುಗಳಾದ ವಾಜಿದ್, ಮಹಬೂಬ್ ಬಾಷಾ, ಫಜ್ಲೂರ್ ರಹಮಾನ್ ಮುಬಾರಕ್, ರಾಜಿಕ್, ನದೀಮ್ ಇತರರು ಭಾಗವಹಿಸಿದ್ದರು.

error: Content is protected !!