ಭಾರತದಲ್ಲಿ ಕಂಡು ಬಂದ ಕೊರೊನಾ ರೂಪಾಂತರಿಗಳಿಗೆ ‘ಕಪ್ಪ’, ‘ಡೆಲ್ಟ’ ಹೆಸರು

ವಿಶ್ವಸಂಸ್ಥೆ, ಜೂ. 1 – ಭಾರತದಲ್ಲಿ ಮೊದಲು ಗುರುತಿಸಲಾದ ಬಿ.1.617.1 ಹಾಗೂ ಬಿ.1.617.2 ಕೊರೊನಾ ರೂಪಾಂತರಿಗಳನ್ನು ವಿಶ್ವ ಆರೋಗ್ಯ ಸಂಘಟನೆ ಕ್ರಮವಾಗಿ §ಕಪ್ಪ¬ ಮತ್ತು §ಡೆಲ್ಟಾ¬ ಎಂಬ ಹೆಸರಿಟ್ಟಿದೆ. ಕೊರೊನಾ ರೂಪಾಂತರಿಗಳ ಹೆಸರುಗಳ ಕುರಿತು ಕಳಂಕ ಹಚ್ಚುವುದನ್ನು ತಡೆಯಲು ಆರೋಗ್ಯ ಸಂಘಟನೆ ಈ ಕ್ರಮ ತೆಗೆದುಕೊಂಡಿದೆ.

ಕೊರೊನಾ ರೂಪಾಂತರಿಯನ್ನು ಭಾರತೀಯ ರೂಪಾಂತರಿ ಎಂದು ಗುರುತಿಸುವುದಕ್ಕೆ ಭಾರತ ಮೂರು ವಾರಗಳ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು. 

ಟ್ವೀಟ್ ಮೂಲಕ ಹೇಳಿಕೆ ನೀಡಿರುವ ಆರೋಗ್ಯ ಸಂಘಟನೆಯ ತಾಂತ್ರಿಕ ಪರಿಣಿತರಾದ ಡಾ. ಮಾರಿಯಾ ವ್ಯಾನ್ ಕೆರ್ಖೋವೆ, ಕೊರೊನಾಗೆ ಸಂಬಂಧಿಸಿದ ವೈಜ್ಞಾನಿಕ ಹೆಸರುಗಳು ಬದಲಾಗುವುದಿಲ್ಲ. ಆದರೆ, ಸಾರ್ವಜನಿಕರ ಚರ್ಚೆಗಾಗಿ ಬೇರೆ ಹೆಸರುಗಳನ್ನು ಬಳಸಲಾಗುವುದು ಎಂದಿದ್ದಾರೆ.

ಇದರಿಂದಾಗಿ ರೂಪಾಂತರಿಗಳ ಹೆಸರು ನೆನಪಿಟ್ಟುಕೊಳ್ಳುವುದು
ಸುಲಭ ವಾಗಲಿದೆ. ರೂಪಾಂತರಿಗಳನ್ನು ಮೊದಲು ಪತ್ತೆ ಮಾಡಿದ ದೇಶಕ್ಕೆ ಪಕ್ಷಪಾತಿ ಹಾಗೂ ಕಳಂಕ ಮಾಡುವುದು ತಪ್ಪುತ್ತದೆ ಎಂದು ಡಾ. ಮಾರಿಯ ಹೇಳಿದ್ದಾರೆ.

ಬ್ರಿಟನ್‌ನಲ್ಲಿ ಮೊದಲು ಪತ್ತೆ ಮಾಡಲಾದ ಬಿ.1.1.7 ರೂಪಾಂತರಿಗೆ ಅಲ್ಫಾ ಎಂಬ ಹೆಸರಿಡಲಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಮಾಡಲಾದ ಬಿ.1.351 ರೂಪಾಂತರಿಗೆ ಬೀಟಾ, ಬ್ರೆಜಿಲ್‌ನಲ್ಲಿ ಪತ್ತೆ ಮಾಡಲಾದ ಜಿ.1 ರೂಪಾಂತರಿಗೆ ಗಾಮ್ಮಾ ಮತ್ತು ಪಿ2 ರೂಪಾಂತರಿಗೆ ಜೆಟಾ ಎಂಬ ಹೆಸರಿಡಲಾಗಿದೆ. ಅಮೆರಿಕದಲ್ಲಿ ಪತ್ತೆ ಮಾಡಲಾದ ರೂಪಾಂತರಿಗೆ ಎಪ್ಸಿಲೊನಿ ಹಾಗೂ ಲೊಟಾ ಎಂಬ ಹೆಸರಿಡಲಾಗಿದೆ.

error: Content is protected !!