14ನೇ ದಿನಕ್ಕೆ ಕಾಲಿಟ್ಟ ಸಾಧು ವೀರಶೈವ ಸಮಾಜದ ದಾಸೋಹ

ಹರಿಹರ, ಮೇ 30 –  ತಾಲ್ಲೂಕು ಸಾಧು ವೀರಶೈವ ಸಮಾಜ, ಶ್ರೀ ತರಳಬಾಳು ಯುವಕ ಸಂಘ, ಶ್ರೀ ತರಳ ಬಾಳು ಮಹಿಳಾ ಸಂಘ, ಶ್ರೀ ತರಳಬಾಳು ಸೇವಾ ಸಮಿತಿ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿರುವ ಕೊರೊನಾ ಸೋಂಕಿತರಿಗೆ ಮತ್ತು ಅವರ ಪರಿಚಾರಕರಿಗೆ ಹಾಗೂ ಕೊರೊನಾ ವಾರಿಯರ್ಸ್‌ ಗಳಿಗೆ ಪ್ರತಿನಿತ್ಯ ಮಧ್ಯಾಹ್ನ ನೀಡುತ್ತಾ ಬಂದಿರುವ ದಾಸೋಹ ವ್ಯವಸ್ಥೆ ಭಾನುವಾರ 14ನೇ ದಿನಕ್ಕೆ ಕಾಲಿಟ್ಟಿದೆ.

12ನೇ ದಿನದ ದಾಸೋಹ ದಾನಿಗಳಾಗಿದ್ದ ಹನಗವಾಡಿ ಗ್ರಾಮದ ನಿವೃತ್ತ ಪ್ರಾಂಶುಪಾಲರಾದ ಬಸವಂತಪ್ಪ ಬಣಕಾರ್ ಅವರು 50 ಸಾವಿರ ರೂ. ದೇಣಿಗೆ ನೀಡಿದರು. 13ನೇ ದಿನವಾದ ಶನಿವಾರ ಹರಿಹರ ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್ ಅವರು ದಾಸೋಹ ದಾನಿಗಳಾಗಿದ್ದರು. 

ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶಾಸಕ ಎಸ್.ರಾಮಪ್ಪ ಅವರು, ಮಧ್ಯಾಹ್ನದ ಊಟ ವಿತರಣೆಗೆ ಚಾಲನೆ ನೀಡಿದರು.

ದಾಸೋಹದ ಉಸ್ತುವಾರಿಗಳಾದ ತರಳಬಾಳು ಯುವಕರ ಸಂಘದ ಅಧ್ಯಕ್ಷ ಕೊಂಡಜ್ಜಿ ವೀರಣ್ಣ ಮಾತನಾಡಿ, ಲಾಕ್‌ಡೌನ್ ಇರುವವರಿಗೂ ಪ್ರತಿದಿನ 500 ಜನರಿಗೆ ಊಟದ ವ್ಯವಸ್ಥೆ ಇರುತ್ತದೆ ಎಂದರು.

ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ, ಎಪಿ ಎಂಸಿ ಮಾಜಿ ಅಧ್ಯಕ್ಷ ಬೆಳ್ಳೂಡಿ ನರೇಂದ್ರ, ತರಳಬಾಳು ಸೇವಾ ಸಮಿತಿ ಅಧ್ಯಕ್ಷ ಕೊಂಡಜ್ಜಿ ಶಿವಕುಮಾರ್, ತರಳಬಾಳು ಮಹಿಳಾ ಸಂಘದ ಅಧ್ಯಕ್ಷೆ ಬೆಳ್ಳೂಡಿ ಗೀತಮ್ಮ, ನಗರಸಭೆ ಸದಸ್ಯರಾದ ಶ್ರೀಮತಿ ಅಶ್ವಿನಿ ಕೃಷ್ಣ, ಕಿರಣ್‌ ಮೂಲಿಮನಿ, ನಾಗರಾಜ್ ಕೋಡಿಹಳ್ಳಿ, ಹನಗ ವಾಡಿ ವಿಜಯಕುಮಾರ್, ಹರಗನಹಳ್ಳಿ ರಾಜು, ಕುಂಬ ಳೂರು ವಿಜಯ್, ಶಿವನಹಳ್ಳಿ ಸಂತೋಷ್, ಬೆಳ್ಳೂಡಿ ಪಾಲಾಕ್ಷಪ್ಪ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!