38ನೇ ವಾರ್ಡ್ನ ಸದಸ್ಯ ಗಡಿಗುಡಾಳ್ ಮಂಜುನಾಥ ಚಾಲನೆ
ದಾವಣಗೆರೆ, ಆ.1 – ಮಹಾನಗರ ಪಾಲಿಕೆ 38ನೇ ವಾರ್ಡ್ನ ಸದಸ್ಯ ಗಡಿಗುಡಾಳ್ ಮಂಜುನಾಥ ಅವರು, ಜನರ ಸಂಕಷ್ಟ ಆಲಿಸಲೆಂದು `ಮನೆಯ ಬಾಗಿಲಿಗೆ ನಿಮ್ಮ ಸೇವಕ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ವಾರ್ಡಿನ 2ನೇ ಮುಖ್ಯ ರಸ್ತೆಯ ಪ್ರತಿಯೊಂದು ಮನೆಗೆ ಭೇಟಿ ಕೊಟ್ಟು ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ನೀಡಲಾಯಿತು.
ವಾರ್ಡಿನ ಸ್ವಚ್ಛತೆ ಹಾಗೂ ವಾರ್ಡನ್ನು ಹಸಿರೀಕರಣಗೊಳಿಸಲು ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಮಳೆಗಾಲದಲ್ಲಿ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಜೊತೆಗೆ ಕೋವಿಡ್ 3ನೇ ಅಲೆಯ ಭೀತಿಯೂ ಇದೆ. ಈ ಹಿನ್ನೆಲೆಯಲ್ಲಿ ವಾರ್ಡ್ನ ರಸ್ತೆಯಲ್ಲಿ ಬಿದ್ದಿರುವ ಕಸ ಮತ್ತು ಖಾಲಿ ನಿವೇಶನದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆಗೆಸಲಾಯಿತು.
ಸರ್ಕಾರದಿಂದ ಕೊರೊನಾ ಲಸಿಕೆ ಸಿಗದಿದ್ದಾಗ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಸಹಕಾರದಿಂದ ಗಡಿಗುಡಾಳ್ ಮಂಜುನಾಥ ಅವರು ಜನರಿಗೆ ಕೋವಿಡ್ ಲಸಿಕೆ ಕೊಡಿಸಿದ್ದಾರೆ.
ಲಸಿಕೆ ಹಾಕಿಸಿಕೊಳ್ಳದ ವಾರ್ಡ್ನ ಜನರಿಗೆ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಯಾಂಪ್ ಏರ್ಪಡಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ವಾರ್ಡ್ನ ಗುರುಮೂರ್ತಿ, ಅಬ್ದುಲ್ ಜಬ್ಬಾರ್ ಸಾಬ್, ಕೆ. ಜಾವೀದ್ ಸಾಬ್, ಪ್ರಕಾಶ್ ಕಬ್ಬೂರು, ಶಿವಣ್ಣ, ಸತೀಶ್, ರಾಜು, ನಿಖಿಲ್, ನೀಲಕಂಠಪ್ಪ, ಮನೀಷ್, ಇಂಜಿನಿಯರ್ ಮಧುಸೂದನ್, ಆರೋಗ್ಯ ನಿರೀಕ್ಷಕರಾದ ಮಹಾಂತೇಶ್, ಅರವಿಂದ್, ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.