ರಾಣೇಬೆನ್ನೂರು, ಆ.2- ಸಮಾಜದಲ್ಲಿರುವ ಎಲ್ಲ ವರ್ಗದ ಜನರ ಅಂಧಕಾರವನ್ನು ಹೋಗಲಾಡಿಸಿ, ಅವರನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಮೂಲಕ ಭೇದ-ಭಾವ ಮರೆತು ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ಸರ್ವರನ್ನು ಸಜ್ಜನರನ್ನಾಗಿಸುವ ಕಾಯಕ ಮಾಡುವ ನಿಜವಾದ ಗುರುಗಳೇ ನಡೆದಾಡುವ ದೇವರುಗಳಾಗಿ ದ್ದಾರೆ ಎಂದರೆ ತಪ್ಪಾಗದು ಎಂದು ಶ್ರೀಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದಲ್ಲಿ ಗುರು ಪೂರ್ಣಿಮೆ ನಿಮಿತ್ಯ ಶಿಷ್ಯ ಹಾಗೂ ಭಕ್ತ ವೃಂದದವರು ಏರ್ಪಡಿಸಿದ್ದ ಗುರು ಪಾದ ಪೂಜೆ- ಗುರು ನಮನ ಸ್ವೀಕರಿಸಿ, ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಹಣ ಸೇರಿದಂತೆ ಮೋಹ ಬಯಸುವ ಯಾವ ಗುರುಗಳು ನಿಜವಾದ ಗುರುಗಳಾಗುವುದಿಲ್ಲ. ಅಂತ ವರನ್ನು ಸಮಾಜವು ಗುರುತಿಸುವುದಿಲ್ಲ. ಹಣೆಬರಹ ವನ್ನು ಬದಲಿಸುವ ದಿವ್ಯಶಕ್ತಿ ಗುರುಗಳಲ್ಲಿದೆ. ಅಂತಹ ಗುರುಗಳಿಂದ ಪ್ರೀತಿ, ವಿಶ್ವಾಸ ಪಡೆದು ಜ್ಞಾನವಂತ ರಾಗಬೇಕು. ದುಡ್ಡಿನಿಂದ ಗುರುಗಳನ್ನು ಓಲೈಸಿದರೆ ನಿಜವಾದ ಗುರುಗಳು ಎಂದಿಗೂ ಸಿಗಲಾರರು. ಗುರುಕಾರುಣ್ಯವಿಲ್ಲದೇ ಯಾರ ಜೀವನವು ಪಾವನವಾಗದು, ಗುರುಗಳಾದವರು ಸರ್ವರನ್ನು ಏಕೋಭಾವನೆಯಿಂದ ಕಾಣುವ ಮಹಾನ್‍ಗುಣ ಹೊಂದಿರಬೇಕು ಎಂದರು.
ಪುನೀತ, ಗುದ್ಲೇಶ್ವರ, ಪರಮೇಶ್ವರ, ವೀರೇಶ್, ದಾನಯ್ಯ, ಮಲ್ಲಿಕಾರ್ಜುನ್, ದಾನೇಶ್, ಸಚಿನ್, ಬಸವರಾಜ್ ಸೇರಿದಂತೆ ಮತ್ತಿತರೆ ಶಾಸ್ತ್ರಿಗಳು, ಪಾಠಶಾಲಾ ವಟುಗಳು ಭಕ್ತರು, ಶಿಷ್ಯಂದಿರು ಮತ್ತಿತರರು ಇದ್ದರು.