ಮಲೇಬೆನ್ನೂರು, ಮಾ.15- ಕೊಮಾರನಹಳ್ಳಿ ಗ್ರಾಮದಲ್ಲಿ ಕನಕ ಬ್ರಿಗೇಡ್ ವತಿಯಿಂದ ಶಿವರಾತ್ರಿ ಅಂಗವಾಗಿ ಪ್ರಥಮ ಬಾರಿಗೆ ಹಮ್ಮಿಕೊಂಡಿದ್ದ ಗ್ರಾಮಾಂತರ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಮಲೇಬೆನ್ನೂರಿನ ಸೆಹ್ವಾಗ್ ವಾರಿಯರ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.
ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಗ್ರಾ.ಪಂ. ಸದಸ್ಯ ಮಡಿವಾಳರ ಸುರೇಶ್, ಗುತ್ತಿಗೆದಾರ ಮಲ್ಲನಾಯ್ಕನಹಳ್ಳಿ ಅಶೋಕ್ ಇನ್ನಿತರರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ಪ್ರಥಮ ಸ್ಥಾನ ಗಳಿಸಿದ ಸೆಹ್ವಾಗ್ ವಾರಿಯರ್ಸ್ ತಂಡಕ್ಕೆ 33,333 ರೂ. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ಪಡೆದ ಕೊಮಾರನಹಳ್ಳಿಯ ಕನಕ ಬ್ರಿಗೇಡ್ ತಂಡಕ್ಕೆ 22,222 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು. ಬಹುಮಾನ ದಾನಿಗಳಾದ ಶಾಸಕ ಎಸ್. ರಾಮಪ್ಪ, ಉದ್ಯಮಿಗಳಾದ ಕುಂಬಳೂರು ವಿರೂಪಾಕ್ಷಪ್ಪ, ನಂದಿಗಾವಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ಅಬೀದ್ ಅಲಿ ಕ್ರಿಕೆಟ್ ತಂಡಗಳಿಗೆ ಶುಭ ಹಾರೈಸಿ, ಆಟ ವೀಕ್ಷಿಸಿದರು.
ಜಿ.ಪಂ.ಸದಸ್ಯ ಎಂ.ಆರ್. ಮಹೇಶ್, ಹೋಟೆಲ್ ಪರಮೇಶ್ವರಪ್ಪ, ಕೆ.ಎಂ. ಕುಮಾರಸ್ವಾಮಿ, ಗಿರಳ್ಳಿ ಕರಿಬಸಪ್ಪ, ಕನಕ ಬ್ರಿಗೇಡ್‌ನ ಯು. ಅಣ್ಣೇಶ್, ಎಸ್.ಬಿ. ವಿಜಯ್, ಮುತ್ತುರಾಜ್, ಜಿ.ಕೆ. ಅಣ್ಣಯ್ಯ, ಪ್ರತಾಪ್, ಕನಕ ಬಾಯ್ಸ್ ತಂಡದ ಸುನೀಲ್, ಮನೋಹರ್ ಮಂಜುನಾಥ್, ಕೃಷ್ಣ, ಸಂತೋಷ್, ಚೇತನ್, ಚಿದಂಬರ ಹಾಗೂ ಕ್ರೀಡಾಭಿಮಾನಿಗಳು ಈ ವೇಳೆ ಹಾಜರಿದ್ದರು.