ಹೊನ್ನಾಳಿ ತಾಲ್ಲೂಕು ಗ್ರಾ.ಪಂ. ನೌಕರರ ಸಮ್ಮೇಳನ
ಹೊನ್ನಾಳಿ, ಮಾ.13- ಗ್ರಾಮ ಪಂಚಾಯಿತಿಯ ಎಲ್ಲಾ ನೌಕರರಿಗೆ 15 ನೇ ಹಣಕಾಸು ಯೋಜನೆಯಡಿ ಏಕಕಾಲದಲ್ಲಿ ವೇತನ ನೀಡುವಂತೆ ಇಓ ಕ್ರಿಯಾಯೋಜನೆ ತಯಾರಿಸು ವಂತೆ ಶಾಸಕ ರೇಣುಕಾಚಾರ್ಯ ಹೇಳಿದರು.
ಅವರು ಹೊನ್ನಾಳಿ ತಾಲ್ಲೂಕು ಗ್ರಾ.ಪಂ. ನೌಕರರ ಸಂಘವು ಸಿಪಿಟಿಯು ಪಟ್ಟಣದ ನೌಕರ ಭವನದಲ್ಲಿ ನಡೆಸಿದ 8 ನೇ ತಾಲ್ಲೂಕು ಸಮೇಳನ ಉದ್ದೇಶಿಸಿ ಮಾತನಾಡಿದರು.
ಸಮೇಳನದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಎ.ಕೆ ಚಂದ್ರಪ್ಪ ದಿಡಗೂರು ಮಾತನಾಡಿ, ಎಂ.ಎಸ್. ಸ್ವಾಮಿ ವರದಿಯಂತೆ ನೌಕರರಿಗೆ ಏಕಕಾಲದಲ್ಲಿ ಅನುಮೊದನೆ ನೀಡಬೇಕು ಸಿಬ್ಬಂದಿಗಳನ್ನು `ಸಿ’ ಮತ್ತು `ಡಿ’ ದರ್ಜೆ ನೌಕರರೆಂದು ಸರ್ಕಾರ ಪರಿಗಣಿಸಲಿ ವೇತನವನ್ನು ಇಎಫ್‍ಎಂಎಸ್ ಮೂಲಕವೇ ನೀಡುವಂತೆ ಒತ್ತಾಯಿಸಿ ಅನುಕಂಪದ ಆಧಾರದ ನೌಕರಿ ದೊರೆಯಬೇಕೆಂದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, ನೌಕರರ ಅನುಮೋದನೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಭೆ ನಡೆಸಿ ಚರ್ಚಿಸಿರುವೆ.
ಸಂಘವು ಸಮ್ಮೇಳನದ ಮೂಲಕ ಒತ್ತಾಯಿಸಿರುವ ವೇತನದ ಬಗ್ಗೆ ಸಂಬಂಧಪಟ್ಟ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಮಾದೇವಿಯೊಂದಿಗೆ ಚರ್ಚಿಸಲಾಗಿದೆ. ನೀರಗಂಟಿ ಸೇರಿದಂತೆ ಇತರೆ ನೌಕರರ 10 ವರ್ಷಗಳ ಜೇಷ್ಠತಾ ಪಟ್ಟಿಗೆ ಮಾನ್ಯ ಮಾಡುವಂತೆ ಚಿಂತನೆ ನಡೆಸಲಾಗಿದೆ ಎಂದರು.
ಸಂಘದ ಜಿಲ್ಲಾ ಅಧ್ಯಕ್ಷ ಉಮೇಶ್, ಜಿಲ್ಲಾ ಪ್ರ.ಕಾ ಶ್ರೀನಿವಾಸ್‍ಚಾರ್, ಇಓ ಗಂಗಾಧರ್, ಎಡಿ ರಾಘವೇಂದ್ರ, ತಾಲ್ಲೂಕು ಸಮಿತಿ ಗೌ.ಅಧ್ಯಕ್ಷ ಕೆ ಶೇಖರಪ್ಪ, ಉಪಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ದಾನಪ್ಪ, ಖಜಾಂಚಿ ಪ್ರಕಾಶ್, ಬೇಲಿಮಲ್ಲೂರು ಲೋಕೇಶ್, ದೇವನಾಯಕನಹಳ್ಳಿ ಸಿ ಮಂಜುನಾಥ್, ಅರಕೆರೆ ಅಶೋಕ್ ಸೇರಿದಂತೆ ಮತ್ತಿತರರು ಇದ್ದರು.
ತಾಲ್ಲೂಕಿನಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.