ಮಲೇಬೆನ್ನೂರು, ಮಾ.13- ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಸತ್ಸಂಗ, ಭಜನೆ ಮತ್ತು ಪೂಜೆ, ಅಭಿಷೇಕಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ದಿವ್ಯ ನೇತೃತ್ವ ವಹಿಸಿದ್ದ ಶ್ರೀ ಯೋಗಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಭಗವಂತನ ನಾಮಸ್ಮರಣೆಯಲ್ಲಿ ನಾವು ಮಾಡುವ ಒಳ್ಳೆಯ ಕೆಲಸಗಳು ನಮಗೆ ತೃಪ್ತಿ ತರಲಿವೆ. ಒತ್ತಡದಲ್ಲಿ ಮನುಷ್ಯನಿಗೆ ಧ್ಯಾನ ಬಹಳ ಮುಖ್ಯವಾಗಿದೆ. ಶಿವರಾತ್ರಿ ಹಬ್ಬದ ದಿನದಂದು ಮಾತ್ರ ನಾವು ಶಿವನನ್ನು ಸ್ಮರಿಸಿದರೆ ಸಾಲದು, ಪ್ರತಿನಿತ್ಯ ನಾವು ನಮ್ಮ ಕಾಯಕದ ಜೊತೆಗೆ ಭಗವಂತನನ್ನು ನೆನೆದರೆ ಮನಸ್ಸಿಗೆ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಗ್ರಾಮದ ಮುರುಗೆಪ್ಪ ಗೌಡ್ರು, ಜಿ. ಆಂಜನೇಯ, ಜಿ. ಬಸಪ್ಪ ಮೇಷ್ಟ್ರು, ಹೊಸಮನಿ ಮಲ್ಲಪ್ಪ, ಎ. ಸುರೇಶ್, ಜಿಗಳಿಯ ಜಿ. ಆನಂದಪ್ಪ, ಬಿ. ಸೋಮಶೇಖರಚಾರಿ, ಕಮದೋಡ ಬಸಪ್ಪ, ಕುಂಬಳೂರಿನ ಕೆ. ಆಂಜನೇಯ, ಹೆಚ್.ಎಂ. ಸದಾಶಿವ, ಸಿರಿಗೆರೆಯ ಸಿದ್ದೇಶ್, ಪಿಎಸಿಎಸ್ ಸಿಇಓ ಶೇಖರಪ್ಪ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.