ಜಿಎಂಐಟಿ : ದಿಶಾ – 2021 ಉದ್ಘಾಟನೆ

ದಾವಣಗೆರೆ, ಮಾ. 12 – ನಗರದ ಜಿ.ಎಂ.ಐ.ಟಿ.ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ. ವಿಭಾಗದಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿಭಾಗದ ಸಾಂಸ್ಕೃತಿಕ, ಕೌಶಲ್ಯ ಅಭಿವೃದ್ಧಿ ವೇದಿಕೆ ದಿಶಾ-2021 ಅನ್ನು ಉದ್ಘಾಟನೆ ಮಾಡಲಾಯಿತು.

ವಿಭಾಗದ ಹಳೆಯ ವಿದ್ಯಾರ್ಥಿ ಹಾಗೂ ಫ್ರಾನ್ಸ್ ಮೂಲದ ಸೊಸೈಟಿ  ಜೆನೆರಲಿ ಕಂಪನಿಯ ಗುಣಮಟ್ಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭರತ್ ಮಳಿಮಠ, ಎಂ.ಬಿ.ಎ. ವಿಭಾಗದ ಮುಖ್ಯಸ್ಥರಾದ ಡಾ. ಪಿ.ಎಸ್. ಬಸವರಾಜು, ದಿಶಾ ಸಂಚಾಲಕ ಡಾ. ಗುರುರಾಜ್ ಪಾಠಕ್, ಪ್ರಾಂಶುಪಾಲ ಡಾ. ವೈ. ವಿಜಯಕುಮಾರ್ ಉಪಸ್ಥಿತರಿದ್ದು ಮಾತನಾಡಿದರು.

ವಿದ್ಯಾರ್ಥಿಗಳಾದ ಎಸ್.ಜಿ. ಬಸವರಾಜ್ ಸ್ವಾಗತಿಸಿದರು. ಜಿ.ಎಸ್. ಸೌಂದರ್ಯ ಪ್ರಾರ್ಥಿಸಿದರು. ಅಝರಾ ಹಾಗೂ ನಟರಾಜ್ ನಿರೂಪಿಸಿದರು. ಬಿ.ಕೆ. ಸುಷ್ಮಾ ವಂದಿಸಿದರು.

error: Content is protected !!