ಹೊನ್ನಾಳಿ, ಮೇ 18- ಪಟ್ಟಣದ ದೇವನಾಯ್ಕನಹಳ್ಳಿಯಲ್ಲಿ ವಾಸವಾಗಿರುವ ಮಹಾರಾಷ್ಟ್ರ ಮೂಲದ ಸಾಯಿಬಾಬಾ ಸಂಚಾರಿ ಅಲೆಮಾರಿ ಸಮುದಾಯದ ಜನರಿಗೆ ಎನ್ಎಸ್ಯುಐ ವಿದ್ಯಾರ್ಥಿ ಕಾಂಗ್ರೆಸ್ ಘಟಕದಿಂದ ಬಸವೇಶ್ವರ ಜಯಂತಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ನೇತೃತ್ವದಲ್ಲಿ ಮಧ್ಯಾಹ್ನದ ಉಪಹಾರವನ್ನು ವಿತರಿಸಲಾಯಿತು.
ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಆಹಾರ ವಿತರಿಸಿ ಮಾತನಾಡಿದ ಶಾಂತನಗೌಡರು, ಬಸವಣ್ಣ ಮತ್ತು ಪೈಗಂಬರರು ಇಬ್ಬರ ಸಂದೇಶ ಒಂದೇ ಆಗಿದ್ದು, ದುಡಿದು ತಿನ್ನುವ ಉದ್ದೇಶ ಹೊಂದಿದ್ದರು. ಕಾಯಕವೇ ಕೈಲಾಸ ಮತ್ತು ದಾಸೋಹದ ಬಗ್ಗೆ ಈ ಇಬ್ಬರು ಮಹನೀಯರು ಅಪಾರ ನಂಬಿಕೆ ಇಟ್ಟಿದ್ದರು ಎಂದರು.
ಕೊರೊನಾದ ಈ ವಿಷಮ ಸಂದರ್ಭದಲ್ಲಿ ತಿಂಗಳುಗಳ ಕಾಲ ಲಾಕ್ಡೌನ್ ಆಗಿರುವುದರಿಂದ ಪಕ್ಷದ ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ ವತಿಯಿಂದ ಹಸಿದವರಿಗೆ ಅನ್ನ ನೀಡುವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಎನ್ಎಸ್ಯುಐ ರಾಜ್ಯ ವಕ್ತಾರ ದರ್ಶನ್ ಬಳ್ಳೇಶ್ವರ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಬಣ್ಣಜ್ಜಿ, ಎನ್ಎಸ್ಯುಐ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮನೋಜ್ ಮದ್ಲಂಕಿ, ಉಪಾಧ್ಯಕ್ಷ ಶ್ರೀಧರ್ಗೌಡ, ಸಂಜಯ್, ಪ್ರದೀಪ್ ಬಡ್ಡಿ ಬಸವರಾಜು, ಅಬ್ದುಲ್ ಘನಿ ಮತ್ತು ಇತರರಿದ್ದರು.