ದಾವಣ ಗೆರೆ, ಜು.29- ಲಯನ್ಸ್ ಕ್ಲಬ್ ದಾವಣಗೆರೆಯ ವಿದ್ಯಾನಗರ ಸಂಸ್ಥೆಯ ನೂತನ ಸಾಲಿನ ಅಧ್ಯಕ್ಷರಾಗಿ ಎಂ.ಎ. ಸುದರ್ಶನ್ಕುಮಾರ್, ಕಾರ್ಯದರ್ಶಿಯಾಗಿ ಬಿ.ದಿಳ್ಯೆಪ್ಪ, ಖಜಾಂಚಿ ಯಾಗಿ ಡಿ.ವಿ.ಗಿರೀಶ್ ಆಯ್ಕೆಯಾಗಿದ್ದಾರೆ.
ಕ್ಲಬ್ನ ಹಾಲಿ ಅಧ್ಯಕ್ಷ ಜಿ.ಎನ್.ಹೆಚ್.ಕುಮಾರ್ ಅವರ ಅಧ್ಯಕ್ಷೆ ಯಲ್ಲಿ ನಾಡಿದ್ದು ದಿನಾಂಕ 31ರ ಶನಿವಾರ ಬೆಳಿಗ್ಗೆ 11.30ಕ್ಕೆ ಮಾಗ ನೂರು ಬಸಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಲಯನ್ಸ್ ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಎನ್.ವಿ.ಹರೀಶ್ ನೂತನ ಪದಾಧಿಕಾರಿಗಳನ್ನು ಪ್ರತಿಷ್ಠಾಪಿಸಲಿದ್ದಾರೆ.