ಮಲೇಬೆನ್ನೂರು, ಜು.29- ರಾಜನಹಳ್ಳಿ ಬಳಿ ನಡೆಯುತ್ತಿರುವ 20 ಕೆರೆ ಗಳಿಗೆ ನೀರು ಪೂರೈಸುವ ಏತ ನೀರಾವರಿ ಬ್ಯಾರೇಜ್ ನಿರ್ಮಾಣದ ಕೆಲಸಕ್ಕಾಗಿ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕೂಲಿ ಕಾರ್ಮಿಕರಿಗೆ ಆನೆ ಕಾಲು ರೋಗ ಮತ್ತು ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಿ. ರಕ್ತ ಪರೀಕ್ಷೆ ಮಾಡಲಾಯಿತು.
ಆರೋಗ್ಯ ಇಲಾಖೆಯಿಂದ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ವಿಜಯ ಕುಮಾರ್ ಗಟ್ಟಿ, ಎಂ.ವಿ. ಹೊರಕೇರಿ, ಹರಿಹರ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಆರೋಗ್ಯ ಸಿಬ್ಬಂದಿಗಳಾದ ದಾದಾಪೀರ್, ಆದರ್ಶ್, ನೀಲಪ್ಪ ದೇವರಾಜ್ ಮತ್ತಿತರರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಂಕರನಾರಾಯಣ ಕನ್‍ಸ್ಟ್ರಕ್ಷನ್ ಕಂಪನಿಯ ಬಾಬು ಪೂಜಾರಿ ಅವರು ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಿದರು.