ದಾವಣಗೆರೆ, ಮಾ. 12- ನಗರದ ನಂದಗೋಕುಲ ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಸಂಸ್ಥೆ ನಿರ್ದೇಶಕರಾದ ಲಕ್ಷ್ಮಿ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಶಿವಲೀಲಾ, ಅನುಸೂಯ, ಮುಖ್ಯೋಪಾಧ್ಯಾಯರಾದ ರೆಹನಾ ಬಾನು ನಾಸಿಕ ಹಾಗೂ ಮಲ್ಲಿಕಾರ್ಜುನ, ಹಿರಿಯ ಶಿಕ್ಷಕ ಬಸವರಾಜು ಉಪಸ್ಥಿತರಿದ್ದರು. ಕಸ್ತೂರಿ ನಿರೂಪಿಸಿದರು. ರೇಣುಕಾ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಕು. ಮಾನಸ ವಂದಿಸಿದರು.
January 10, 2025