ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್, 6ನೇ ಮೇನ್ ವಾಸಿ, ಎಂ.ಕೆ. ಇಂಡಸ್ಟ್ರೀಸ್ ಮಾಲೀಕರಾದ ಶ್ರೀ ಎಂ. ಕನ್ನಪ್ಪ ಅವರು ದಿನಾಂಕ 12.03.2021ರ ಶುಕ್ರವಾರ ಸಂಜೆ 4.15ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 84 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 13.03.2021ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಜಿಎಂಐಟಿ ಹಿಂಭಾಗ, ಆಯುರ್ವೇದಿಕ್ ಕಾಲೇಜ್ ರಸ್ತೆಯಲ್ಲಿರುವ ಮೃತರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025