ಹರಿಹರ, ಮಾ.11- ರಾಣೇಬೆನ್ನೂರಿನಿಂದ ತುಮಕೂರಿಗೆ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ನಂ.ಕೆಎ-15, 9853 ಲಾರಿಯನ್ನು ಹರಿಹರ ಬೈಪಾಸ್ನ ಹುಲ್ಲುಮನಿ ಕ್ರಷರ್ ಬಳಿ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಹಿಡಿದು, ಅದರಲ್ಲಿದ್ದ 150 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ಸಿಪಿಐ ಯು. ಸತೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಾಲ್ಲೂಕಿನ ಆಹಾರ ಶಿರಸ್ತೇದಾರ್ ಯು.ಆರ್. ರಮೇಶ್, ಗ್ರಾಮಾಂತರ ಎಎಸ್ಐ ಮಹಮ್ಮದ್ ಸೈಫುದ್ದೀನ್, ಸಿಬ್ಬಂದಿಗಳಾದ ಹನುಮಂತಪ್ಪ, ವೆಂಕಟೇಶ್ ಮತ್ತು ಮಹಮ್ಮದ್ ರಸೂಲ್ ಪಾಲ್ಗೊಂಡಿದ್ದರು.
January 2, 2025