ಹರಿಹರ, ಮಾ.11- ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶಿವರಾತ್ರಿ ಕಾರ್ಯಕ್ರಮ ಶಿವಧ್ವಜಾರೋಹಣ, ದೀಪಾರಾಧನೆ, ಶಿವ ನಾಮಸ್ಮರಣೆ, ಶಿವ ಧ್ಯಾನ, ಯೋಗ, ತಪಸ್ಸು, ಅಧ್ಯಾತ್ಮಿಕ ಚಿಂತನೆ ಮತ್ತು ಜೋತಿರ್ಲಿಂಗ ದರ್ಶನ ಸಮಾರಂಭವನ್ನು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ.ಕೆ.ಶಿವದೇವಿ ಅಕ್ಕನವರ ಅಧ್ಯಕ್ಷತೆಯಲ್ಲಿ ನೆರವೇರಿತು. ಬಿ.ಕೆ.ಅನಸೂಯಾ ಅಕ್ಕ, ತುಂಗಭದ್ರಾ ಬ್ಯಾಂಕ್ ಅಧ್ಯಕ್ಷ ಶಿವಾನಂದಪ್ಪ ಎಂ.ಹಲಸಬಾಳು, ನಾರೇಯಣ ಬ್ಯಾಂಕ್ ಉಪಾಧ್ಯಕ್ಷ ಶ್ರೀಮೂರ್ತಿ, ಕೊಂಡಜ್ಜಿ ನಾಗಪ್ಪ, ಉಪನ್ಯಾಸಕರಾದ ಶ್ರೀಮತಿ ಶೈಲಾ ರವೀಂದ್ರ, ಶಿವಪ್ರಸಾದ್ ಹಾಗೂ ಸಂಸ್ಥೆಯ ಸರ್ವ ಸಾಧಕರು ಭಾಗವಹಿಸಿದ್ದರು.
December 27, 2024