ಸೋಂಕಿತರು, ಬಡವರ ಅನ್ನ ದಾಸೋಹಕ್ಕೆ ದಾನಿಗಳ ಸಹಾಯಹಸ್ತ

ದಾವಣಗೆರೆ, ಮೇ 17- ಸೋಂಕಿತರು ಮತ್ತು ಬಡವರಿಗೆ ಉಚಿತವಾಗಿ ದಿನ ನಿತ್ಯ 1500 ಜನರಿಗೆ ಅನ್ನ ದಾಸೋಹ ಮಾಡುತ್ತಿರುವ ನಗರದ ತರಳಬಾಳು ಸೇವಾ ಸಮಿತಿ ಮತ್ತು ಶಿವಸೈನ್ಯ ಯುವಕರ ಸಂಘಕ್ಕೆ ಅನೇಕರು ದಾನ ಮಾಡು ವುದರ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಶ್ರೀ ನಿತ್ಯಾ ಚೇತನಾ ಚಿಟ್ಸ್ ಪ್ರೈ ಲಿ. ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್ ಮಾಲೀಕರಾದ ಇಂದ್ರಪ್ಪ ಗೌಡ್ರು ಒಂದು ಲಕ್ಷ ರೂ., ಶಿವಗಂಗಾ ಶ್ರೀನಿವಾಸ್ ಒಂದು ಲಕ್ಷ ರೂ., ಹೋಟೆಲ್‌ ಉದ್ಯಮಿ ಅಣಬೇರು ರಾಜಣ್ಣ 50 ಸಾವಿರ ರೂ.,  ಶಾಸಕ ಪ್ರೊ|| ಎಸ್.ಲಿಂಗಣ್ಣ 50 ಸಾವಿರ ರೂ., ಲೋಕಿಕೆರೆ ನಾಗರಾಜ್ 50 ಸಾವಿರ ರೂ., ಪಾಲಿಕೆ ಮಾಜಿ ಸದಸ್ಯರಾದ ಶಿವನಹಳ್ಳಿ ರಮೇಶ್ 50 ಸಾವಿರ ರೂ., ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರ್ 10 ಸಾವಿರ ರೂ., ಶಿವ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಐಗೂರು ಚಂದ್ರಶೇಖರ್ 15 ಸಾವಿರ ರೂ.  ದಾನ ಮಾಡುವುದರ ಮೂಲಕ ಹಾಗೂ ಮುದೇಗೌಡ್ರು ಗಿರೀಶ್ ಅವರು 5 ದಿನದ ತರಕಾರಿ ವ್ಯವಸ್ಥೆ ಮಾಡಿದ್ದಾರೆ.

ಸಹಾಯ ಮಾಡುತ್ತಿರುವ ಎಲ್ಲಾ ದಾನಿ ಗಳನ್ನು ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಗೌರವಾಧ್ಯಕ್ಷ ಶಶಿಧರ್ ಹೆಮ್ಮನಬೇತೂರು, ಮಹಾಪೌರ ಎಸ್.ಟಿ.ವೀರೇಶ್ ಹಾಗೂ ಸಂಘದ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಬಸವಂತಪ್ಪ, ಮಾಗನೂರು ಉಮೇಶ್‌ಗೌಡ್ರು, ಲಿಂಗರಾಜ್ ಅಗಸನಕಟ್ಟೆ, ಶ್ರೀನಿವಾಸ್ ಮೆಳ್ಳೇ ಕಟ್ಟೆ, ಪ್ರಭು ಕಾವಲಹಳ್ಳಿ, ಶಿವಕುಮಾರ್ ಕೊರಟಿ ಕೆರೆ, ಹಾಲೇಶ್ ಕಂಸಾಗರ, ಹರೀಶ್ ಬೆಳ್ಳಿಗನೂಡು, ಚಾಮುಂಡಿ ಉಮೇಶ್, ಬಸವ ರಾಜ್ ಸೋಮನಹಳ್ಳಿ, ಕಕ್ಕರಗೊಳ್ಳದ ಪರಮೇಶ್ವರಪ್ಪ, ಬಿ.ವಾಮದೇವಪ್ಪ ಮತ್ತಿತರರು  ಉಪಸ್ಥಿತರಿದ್ದರು.

error: Content is protected !!