ರಾಣೇಬೆನ್ನೂರು ಮೃತ್ಯುಂಜಯ ನಗರ 5ನೇ ಕ್ರಾಸ್ ವಾಸಿ ದಿ|| ಹನುಮಂತಪ್ಪ ಗಿಡ್ಡಪ್ಪ ಅಯ್ಯಜ್ಜನವರ ಧರ್ಮಪತ್ನಿ ಮತ್ತು ದಾವಣಗೆರೆ ಹಳೇ ಮಹಿಳಾ-ಮಕ್ಕಳ ಆಸ್ಪತ್ರೆ ನಿವೃತ್ತ ನೌಕರರಾಗಿದ್ದ ಶ್ರೀಮತಿ ಕೆಂಚಮ್ಮ (72) ಅವರು ದಿನಾಂಕ 24.7.2021ರ ಶನಿವಾರ ಮಧ್ಯಾಹ್ನ 1.54 ಕ್ಕೆ ನಿಧನರಾದರು. ಸರ್ಕಾರಿ ಐಟಿಐ ಕಿರಿಯ ತರಬೇತಿ ಅಧಿಕಾರಿ ಹೆಚ್. ಮಂಜುನಾಥ್ ಸೇರಿದಂತೆ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 25.7.2021ರ ಭಾನುವಾರ ಬೆಳಿಗ್ಗೆ 10.30 ಕ್ಕೆ ರಾಣೇಬೆನ್ನೂರಿನ ಮುಕ್ತಿಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024