ದಾವಣಗೆರೆ, ಜು. 26- ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ದಾವಣಗೆರೆ ವಿಭಾಗದ ದಾವಣಗೆರೆ ಮತ್ತು ಹರಿಹರ ದಿಂದ ರಾಜಹಂಸ ಸಾರಿಗೆ ವಿಶೇಷ ಪ್ಯಾಕೇಜ್ ಸೇವೆ ಆರಂಭಿಸಲಾಗಿದೆ. ಭಾನುವಾರದಂದು ಮಾತ್ರ ಈ ಸೇವೆ ಪ್ರಾರಂಭಿಸಲಾಗಿತ್ತು. ಆದರೆ, ಈ ಪ್ಯಾಕೇಜ್ ಪ್ರಯಾಣಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ಬಂದ ಕಾರಣ ಆ.1 ರಿಂದ ವಾರದ ಎಲ್ಲಾ ದಿನಗಳಂದು ಬಸ್ ಕಾರ್ಯಚರಣೆ ನಡೆಸಲು ಉದ್ದೇಶಿಸಲಾಗಿದೆ.
ದಾವಣಗೆರೆಯಿಂದ ಬೆಳಿಗ್ಗೆ 7 ಕ್ಕೆ ಹೊರಟು, ಹರಿಹರ 7-30, ಶಿರಸಿ- ಬೆ. 10.30 ಕ್ಕೆ ತಲುಪುತ್ತದೆ. 12 ಕ್ಕೆ ಶಿರಸಿಯಿಂದ ಹೊರಟು ಮಧ್ಯಾಹ್ನ 1.30 ಕ್ಕೆ ಜೋಗವನ್ನು ತಲುಪುತ್ತದೆ. ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆಯನ್ನು ತಲುಪುತ್ತದೆ. ಪ್ರಯಾಣ ದರ 500 ರೂ. (ಹೋಗಿ ಬರುವ 2 ಬದಿ ಸೇರಿ) ಮಕ್ಕಳಿಗೆ 375 ರೂ. ಹರಿಹರದಿಂದ ಹೊರಡುವ ಪ್ರಯಾಣಿಕರಿಗೆ ದರ 475 ರೂ. ಮಕ್ಕಳಿಗೆ ರೂ 350 ರೂ. ನಿಗದಿಪಡಿಸಲಾಗಿದೆ. ಮುಂಗಡ ಬುಕ್ಕಿಂಗ್ ಕೌಂಟರ್‍ಗಳಲ್ಲಿ ಬುಕ್ಕಿಂಗ್ ಸೌಕರ್ಯ ಕಲ್ಪಿಸಲಾಗಿದೆ ಎಂದು ದಾವಣಗೆರೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.