ದಾವಣಗೆರೆ, ಮಾ.9- ಅಬಕಾರಿ ಇಲಾಖೆಯ ಕರ್ನಾಟಕ ಪಾನೀಯ ನಿಗಮದ (ಕೆಎಸ್ ಬಿಸಿಎಲ್)ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಬಾಕಿ ಉಳಿದಿದ್ದ ಅವಧಿ ಮೀರಿದ್ದ 9.30 ಲಕ್ಷ ಮೌಲ್ಯದ ಮದ್ಯವನ್ನು ನಾಶ ಮಾಡಲಾಗಿದೆ.
ಒಟ್ಟು 579 ಪೆಟ್ಟಿಗೆ 31 ಬಾಟಲ್ ಸೇರಿ 4,564,390 ಲೀಟರ್ ಬಿಯರ್ ದಾಸ್ತಾನನ್ನು ಇಂದು ಮಧ್ಯಾಹ್ನ ಅಬಕಾರಿ ಉಪಆಯುಕ್ತ ಬಿ. ಶಿವಪ್ರಸಾದ್, ಉಪ ಅಧೀಕ್ಷಕ ಕೆ.ಎಲ್. ನಾಗರಾಜ್, ಕೆಎಸ್ ಬಿಸಿಎಲ್ ಡಿಪೋ ವ್ಯವಸ್ಥಾಪಕ ಕಲ್ಲೇಶಪ್ಪ ನೇತೃತ್ವದಲ್ಲಿ ಡಿಪೋ ಆವರಣದಲ್ಲಿ ನಾಶ ಮಾಡಲಾಯಿತು. ಒಟ್ಟು 9,30,699 ರೂ. ಮೌಲ್ಯದ ಮದ್ಯ ನಾಶಪಡಿಸಲಾಗಿದೆ.