ಮಲೇಬೆನ್ನೂರು, ಜು.25- ಸ್ಥಳೀಯ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶ್ರೀಮತಿ ರೋಹಿಣಿ ಬಿ.ಎಂ ಜಗದೀಶ್ವರ ಸ್ವಾಮಿ, ಕಾರ್ಯದರ್ಶಿಯಾಗಿ ನಿಟ್ಟೂರಿನ ಶ್ರೀಮತಿ ರೂಪಾ ಪಾಟೀಲ್, ಖಜಾಂಚಿ ಯಾಗಿ ನಿಟ್ಟೂರಿನ ಶ್ರೀಮತಿ ಪಾರ್ವತಮ್ಮ ಇ.ಎಂ ಮರುಳಸಿದ್ದಪ್ಪ ಆಯ್ಕೆಯಾಗಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಾಳೆ ಸೋಮವಾರ ಬೆಳಿಗ್ಗೆ 11.30 ಕ್ಕೆ ಲಯನ್ಸ್ ಭವನದಲ್ಲಿ ನಡೆಯಲಿದೆ. ಶ್ರೀಮತಿ ವಿದ್ಯಾಲತಾ ಯು. ಶೆಟ್ಟಿ ಅವರು ನೂತನ ತಂಡವನ್ನು ಪ್ರತಿಷ್ಠಾ ಪಿಸಲಿದ್ದು, ಮಾಜಿ ರಾಜ್ಯಪಾಲ ಡಾ. ಟಿ. ಬಸವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
December 26, 2024