ಮಲೇಬೆನ್ನೂರು, ಮಾ.8- ಕಾಗಿನೆಲೆ ಕನಕ ಗುರು ಪೀಠದ ಬೆಳ್ಳೂಡಿ ಶಾಖಾ ಮಠದ ಆವರಣದಲ್ಲಿ ನೂತನ ವಾಗಿ ನಿರ್ಮಿಸಿರುವ ಹೊರ ಬೀರ ದೇವರ ದೇವಸ್ಥಾನ, ಸಮುದಾಯ ಭವನ, ಮುಖ್ಯ ದ್ವಾರ, ವಿದ್ಯಾರ್ಥಿ ನಿಲಯ ಹಾಗೂ ಹಾಲುಮತ ಸಮಾಜದ ಮಹಾ ದಾರ್ಶನಿಕರ ಪುತ್ಥಳಿಗಳ ಲೋಕಾರ್ಪಣೆ ಸಮಾರಂಭ ವನ್ನು ಏಪ್ರಿಲ್ 3, 4 ಮತ್ತು 5 ರಂದು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಭಾನುವಾರ ಶ್ರೀ ನಿರಂಜನಾನಂದಪುರಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಎಸ್. ರಾಮಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಜಿ. ದ್ಯಾಮಣ್ಣ, ನಿವೃತ್ತ ಅಧಿಕಾರಿಗಳಾದ ಭಾನುವಳ್ಳಿ ಚಂದ್ರಪ್ಪ, ಕುಣೆಬೆಳಕೆರೆ ದೇವೇಂದ್ರಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ಐರಣಿ ಅಣ್ಣಪ್ಪ, ಉದ್ಯಮಿ ನಂದಿಗಾವಿ ಶ್ರೀನಿವಾಸ್, ಜಿಗಳಿಯ ಡಿ.ಹೆಚ್. ಮಂಜುನಾಥ್, ಭಾನುವಳ್ಳಿಯ ಕೆ. ಬೀರಪ್ಪ, ತಾಲ್ಲೂಕು ಕುರುಬ ಸಮಾಜದ ಕಾರ್ಯದರ್ಶಿ ಕೆ.ಪಿ. ಗಂಗಾಧರ್, ಮಲ್ಲನಾಯ್ಕನಹಳ್ಳಿ ಅಶೋಕ್, ಮಲೇಬೆನ್ನೂರಿನ ಬಿ. ಚಂದ್ರಪ್ಪ, ಬಿ. ಮಂಜುನಾಥ್ ಇನ್ನಿತರೆ ಗಣ್ಯರು ಭಾಗವಹಿಸಿದ್ದರು.