ಸಾಣೇಹಳ್ಳಿ, ಮಾ.6- ಸ್ಥಳೀಯ ಶ್ರೀಮಠದ ದೀಕ್ಷಾ ಮಂಟಪದಲ್ಲಿ ಇಷ್ಟಲಿಂಗ ಮತ್ತು ಜಂಗಮ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ದೀಕ್ಷೆ ನೀಡಿ ಮಾತನಾಡಿ, ದೇವರನ್ನು ಇಷ್ಟಲಿಂಗದ ರೂಪದಲ್ಲಿ ಕರಸ್ಥಳಕ್ಕೆ ತರುವುದೇ ಲಿಂಗದೀಕ್ಷೆ. ನಿಷ್ಠೆಯಿಂದ ಪೂಜಿಸಿದರೆ ಲಿಂಗವೇ ನಮಗೆ ಸರಿ-ತಪ್ಪು, ನೀತಿ-ಅನೀತಿಗಳು ಯಾವುದೆಂದು ತೋರುವುದು ಎಂದರು.
ತನ್ನ ತಾನರಿಯುವುದೇ ದೇವರನ್ನು ಅರಿಯುವ ಕ್ರಿಯೆ. ದೇವರು ಬೇರೆ ಎಲ್ಲೂ ಇಲ್ಲ. ತನ್ನೊಳಗೆ ಇದ್ದಾನೆಂದು ತಿಳಿದುಕೊಳ್ಳುವ ಮಾರ್ಗವೇ ಲಿಂಗಪೂಜೆ. ಇದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರೆತು ಬದುಕು ಕಳೆಗಟ್ಟುವುದು. ಜಂಗಮ ದೀಕ್ಷೆ ಪಡೆದುಕೊಂ ಡವರು ಲಿಂಗ ತತ್ವವನ್ನು ಪ್ರಚಾರ, ಪ್ರಸಾರ ಮಾಡುವ ಕೈಂಕರ್ಯ ಕೈಗೊಳ್ಳಬೇಕು ಎಂದರು.
ನಿವೃತ್ತ ಪಾರ್ಚಾರ್ಯ ಐ.ಜಿ. ಚಂದ್ರಶೇಖರಯ್ಯ ಜಂಗಮ ದೀಕ್ಷೆ, ಲಿಂಗದೀಕ್ಷೆ, ಲಿಂಗಪೂಜೆಯ ವಿಧಿ-ವಿಧಾನಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿಕೊಟ್ಟರು. ಧಾರ್ಮಿಕ ವಿಧಿ-ವಿಧಾನಗಳನ್ನು ಬಸಯ್ಯ, ಸಿದ್ಧಯ್ಯ, ಮರುಳ ಸಿದ್ಧಯ್ಯ, ಸಚಿನ್ ನಡೆಸಿಕೊಟ್ಟರು. ಸುಮಾರು 35 ಜನರು ದೀಕ್ಷೆ ಪಡೆದುಕೊಂಡರು.
ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್ ಮತ್ತು
ಕೆ. ದಾಕ್ಷಾಯಣಿ ಗುರು,ಲಿಂಗ, ಜಂಗಮ, ಕಾಯಕ, ಸದಾಚಾರದ ಮಹತ್ವ ಸಾರುವ ವಚನಗಳನ್ನು ಹೇಳಿಕೊಟ್ಟರು. ಬಾಹುಬಲಿಯವರು ಇಂದಿನ ದೀಕ್ಷಾ ದಾಸೋಹಿಗಳಾಗಿದ್ದರು.
ಲಿಂಗದೀಕ್ಷೆ ಪಡೆದುಕೊಳ್ಳುವ ಆಸಕ್ತರು ಶಿಕ್ಷಕ ಮರು ಳಸಿದ್ಧಯ್ಯ (9663177254) ಗೆ ಸಂಪರ್ಕಿಸುವುದು.