ಮಲೇಬೆನ್ನೂರು, ಮಾ. 7 – ಇಲ್ಲಿನ ಜಿಗಳಿ ರಸ್ತೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಶಿಬಾರ ಕಟ್ಟೆಯಲ್ಲಿ ಭಾನುವಾರ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರತಿಷ್ಠಾಪನೆಯ 11ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪರವು ಕಾರ್ಯಕ್ರಮದಲ್ಲಿ ಭಕ್ತರು ಬಾಯಿಗೆ ತ್ರಿಶೂಲ್ ಹಾಯಿಸಿದ್ದು ಮತ್ತು ಮೈಮೇಲೆ ಚಾಟಿ ಬೀಸಿ ಭಕ್ತಿ ಸಮರ್ಪಿಸಿದ ದೃಶ್ಯಗಳು ಗಮನ ಸೆಳೆದವು.
ಶಿಬಾರ ಕಟ್ಟೆಗೆ ವಿಶೇಷವಾಗಿ ಹೂವಿನ ಅಲಂಕಾರ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.