ನಿಜಲಿಂಗಪ್ಪ ಬಡಾವಣೆ `ಎ’ ಬ್ಲಾಕ್, ಮೋರ್ ಹಿಂಭಾಗದ ವಾಸಿ ಅಂದನೂರು ಮಹಾಲಿಂಗಪ್ಪ (ಕಿರಾಣಿ ಅಂಗಡಿ) ಇವರ ಪತ್ನಿ ಅಂದನೂರು ಚನ್ನಬಸಮ್ಮ (82) ಇವರು ದಿನಾಂಕ 2.05.2021 ರ ಭಾನುವಾರ ಸಂಜೆ 5 ಗಂಟೆಗೆ ನಿಧನರಾದರು. ಓರ್ವ ಪುತ್ರಿ, ಓರ್ವ ಪುತ್ರ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 3.05.2021ರ ಸೋಮವಾರ ಬೆಳಗ್ಗೆ 8 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024