ಐಪಿಎಲ್ ಮುಂದೂಡಿಕೆ ಬೆನ್ನಲ್ಲೇ ಯುಎಇಗೆ ಟಿ-20 ವರ್ಗಾವಣೆ

ಐಪಿಎಲ್ ಮುಂದೂಡಿಕೆ ಬೆನ್ನಲ್ಲೇ ಯುಎಇಗೆ ಟಿ-20 ವರ್ಗಾವಣೆ - Janathavaniನವದೆಹಲಿ, ಮೇ 4 – ಕೊರೊನಾ ಕಾರಣದಿಂದಾಗಿ ಐ.ಪಿ.ಎಲ್. ಪಂದ್ಯಾ ವಳಿ ಮುಂದೂಡಿಕೆಯಾದ ಬೆನ್ನಲ್ಲೇ, ಈ ವರ್ಷ ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಪಂದ್ಯಾವಳಿ ಯು.ಎ.ಇ.ಗೆ ವರ್ಗಾವಣೆಯಾಗಿದೆ.

ನವೆಂಬರ್ ತಿಂಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ಆ ವೇಳೆಗೆ 3ನೇ ಅಲೆ ಬರಲಿದೆ ಎಂದು ಪರಿಣಿತರು ಹೇಳಿ ದ್ದಾರೆ. ಹೀಗಾಗಿ ಯಾವುದೇ ತಂಡ ಭಾರತಕ್ಕೆ ಬರಲು ಒಲವು ಹೊಂದಿಲ್ಲ ಎಂದು ಬಿ.ಸಿ.ಸಿ.ಐ. ತಿಳಿಸಿದೆ.

ಒಂದು ತಿಂಗಳ ಸಮಯದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಈ ನಡುವೆ, ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ 16ರ ವಯಸ್ಸಿನ ಒಳಗಿನವರ ಪಂದ್ಯಾವಳಿಯನ್ನು ನಡೆಸುವ ಬಗ್ಗೆಯೂ ಅತಂತ್ರ ಪರಿಸ್ಥಿತಿ ಉಂಟಾಗಿದೆ.

ಬಿ.ಸಿ.ಸಿ.ಐ.ನ ಉನ್ನತ ಅಧಿಕಾರಿಗಳು ಇತ್ತೀಚೆಗೆ ಕೇಂದ್ರ ಸರ್ಕಾರದ ಉನ್ನತರ ಬಳಿ ಟಿ20 ಪಂದ್ಯಾವಳಿ ಕುರಿತು ಚರ್ಚಿಸಿದ್ದರು. ಈ ಸಂದರ್ಭದಲ್ಲಿ ಪಂದ್ಯವನ್ನು ಯು.ಎ.ಇ.ಗೆ ವರ್ಗಾಯಿಸುವ ಬಗ್ಗೆ ಬಹುತೇಕ ಅಂತಿಮ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಐ.ಪಿ.ಎಲ್. ಪಂದ್ಯಾವಳಿ ಆರಂಭವಾದ ನಾಲ್ಕು ವಾರಗಳಲ್ಲೇ, ಭಾಗವಹಿಸಿದ್ದ ಹಲವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಜಾಗತಿಕ ಮಟ್ಟದ ಪಂದ್ಯಾವಳಿಯನ್ನು ಭಾರತದಲ್ಲಿ ಆಯೋಜಿಸುವುದು ಸೂಕ್ತವಲ್ಲ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಬಿ.ಸಿ.ಸಿ.ಐ.ನ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ನವೆಂ ಬರ್ ವೇಳೆಗೆ ಮೂರನೇ ಕೊರೊನಾ ಅಲೆ ಬರುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಾವಳಿಯನ್ನು ಯು.ಎ.ಇ .ಗೆ ವರ್ಗಾಯಿಸುವುದೇ ಸೂಕ್ತ ಎಂದವರು ಹೇಳಿದ್ದಾರೆ.

ಸೆಪ್ಟೆಂಬರ್ ವೇಳೆಗೆ ಕೊರೊನಾದ ಮೂರನೇ ಅಲೆ ಬರಲಿದೆ ಎಂದು ಪರಿಣಿತರು ಎಚ್ಚರಿಸಿರುವುದಾಗಿ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ಐ.ಪಿ.ಎಲ್. ಪಂದ್ಯಾವಳಿಯಲ್ಲಿ ಪಾಲ್ಗೊಂಡ ಹಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದಾಗಿ ಪಂದ್ಯಾವಳಿಯನ್ನು ಅಮಾನತ್ತುಗೊಳಿಸ ಲಾಗಿದೆ. ಆಟಗಾರರನ್ನು ಅವರ ದೇಶಗಳಿಗೆ ಸುರಕ್ಷಿತ ವಾಗಿ ಕಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಬಿಸಿಸಿಐ ಹೇಳಿದೆ.

error: Content is protected !!