ಹರಪನಹಳ್ಳಿ, ಜು.22- ಆರ್ಟಿಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ಗೃಹ ಇಲಾಖೆ ಹಾಗೂ ಡಿಐಜಿಗೆ ಪತ್ರ ಬರೆಯುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ಯೆ ಮಾಡಿದವರನ್ನು ಬಂಧಿಸಿದ್ದಾರೆ. ಆದರೆ ಹತ್ಯೆಯ ಹಿಂದೆ ಇದ್ದವರನ್ನು ಬಂಧಿಸಿಲ್ಲ. ತಮಗೆ ಸಂಬಂಧವಿಲ್ಲ ಎಂದಾ ದರೆ ಪಿ.ಟಿ. ಭರತ್ ಏಕೆ ತಲೆ ಮರೆಸಿಕೊಂಡಿದ್ದಾರೆ ? ಎಂದು ಅವರು ಪ್ರಶ್ನಿಸಿದ್ದಾರೆ. ವಿಜಯನಗರ ಜಿಲ್ಲಾ ಕೆಆರ್ಎಸ್ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ, ಪ್ರಧಾನ ಕಾರ್ಯದರ್ಶಿ ಪಾಯ ಗಣೇಶ, ರಾಜ್ಯ ಜಂಟಿ ಕಾರ್ಯದರ್ಶಿ ಸೋಮಸುಂದರ್, ಅರವಿಂದ ಕೆ.ಬಿ. ನಾಯ್ಕ್ ಇನ್ನಿತರರಿದ್ದರು.