ಕೂಡ್ಲಿಗಿ, ಜು.22- ಇಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಬಳ್ಳಾರಿ ಉಪನಿರ್ದೇಶಕ ಸಿ. ರಾಮಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾನಾಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಡಿಡಿಪಿಐ ರಾಮಪ್ಪ ಅವರು ಮೊದಲು ಭೇಟಿ ನೀಡಿದರು. ಅಲ್ಲಿಂದ ಹೊಸಹಳ್ಳಿ, ಚಿಕ್ಕಜೋಗಿಹಳ್ಳಿಯ ಕೇಂದ್ರಗಳಿಗೂ ಆಗಮಿಸಿ, ನಂತರ ಕೂಡ್ಲಿಗಿಯ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದರು.
ಬಿಇಒ ಉಮಾದೇವಿ ಅವರು ಚಿಕ್ಕಜೋಗಿಹಳ್ಳಿಯ ಬಾಲಕರ ಸರ್ಕಾರಿ ಪ್ರೌಢಶಾಲೆ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರ, ಹೊಸಹಳ್ಳಿ, ಇತರೆಡೆ ಇರುವ ಪರೀಕ್ಷಾ ಕೇಂದ್ರಗಳಿಗೂ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ಕಚೇರಿಯ ಅಧೀಕ್ಷಕ ಅನಂತ್ ಕುಮಾರ್, ಸ್ಥಾನಿಕ ಜಾಗೃತದಳದ ಅಧಿಕಾರಿ ಪಾಲ್ತೂರು ಶಿವರಾಜ್, ಮಾರ್ಗಾಧಿಕಾರಿ ಬಿ.ಮಂಜುನಾಥ, ಬೊಮ್ಮಯ್ಯ, ಬಿಆರ್‌ಪಿ ತಳವಾರ ಶರಣಪ್ಪ, ಚಿಕ್ಕಜೋಗಿಹಳ್ಳಿ ಪರೀಕ್ಷಾ ಕೇಂದ್ರದ ಜಾಗೃತ ದಳದ ಕರಿಬಸಪ್ಪ, ಬಸೆಟ್ಟೆಪ್ಪ, ಕೇಂದ್ರದ ಮುಖ್ಯಸ್ಥ ಶೇಖರಪ್ಪ, ಬಸವರಾಜಪ್ಪ ಸೇರಿದಂತೆ ಇತರರಿದ್ದರು.