ಕೊಮಾರನಹಳ್ಳಿ ಕೆರೆಗೆ ತ್ಯಾಜ್ಯ: ನಾಗರಿಕರ ಆತಂಕ

ಮಲೇಬೆನ್ನೂರು, ಮಾ.5- ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ಐತಿಹಾಸಿಕ ಕೆರೆಗೆ ಘನ ತ್ಯಾಜ್ಯ ವಸ್ತುಗಳನ್ನು ಹಾಕಲಾಗುತ್ತಿದ್ದು, ಕೆರೆಯ ನೀರು ಮಲಿನಗೊಳ್ಳುತ್ತಿರುವ ಕುರಿತು ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಬೇಸಿಗೆ ಸಮಯದಲ್ಲಿ ಜನ-ಜಾನುವಾರುಗಳಿಗೆ ಮತ್ತು ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲೆಂದು ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ಪಂಪ್‌ಸೆಟ್ ಮೂಲಕ ಭದ್ರಾ ಕಾಲುವೆಯಿಂದ ಕೆರೆಗೆ ನೀರು ಹರಿಸಿದ್ದರು. ನಂತರ ಮಳೆ ನೀರು ಸೇರಿ ಕೆರೆ ಭರ್ತಿಯಾಗಿದೆ. 

ಆದರೀಗ ಜವಾಬ್ದಾರಿ ಗೊತ್ತಿ ರುವವರೇ ಘನತ್ಯಾಜ್ಯ ವಸ್ತುಗಳನ್ನು ಕೆರೆಯಲ್ಲಿ ತಂದು ಹಾಕುತ್ತಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ಜನತಾವಾಣಿಗೆ ಚಿತ್ರ ಸಹಿತ ಮಾಹಿತಿ ನೀಡಿದ್ದಾರೆ. 

ಸಮುದಾಯ ಭವನದ ಕಸವನ್ನು  ಕೆರೆಗೆ ಹಾಕ ಲಾಗುತ್ತಿದೆ ಎಂದು ಹೇಳಲಾಗಿದೆ. ಈ ರೀತಿ
ಕಸ ಹಾಕುವುದರಿಂದ ಜೀವರಾಶಿ ಗಳಿಗೆ ತೊಂದರೆ ಆಗುತ್ತದೆ ಎಂಬುದನ್ನು ಕಸ ಹಾಕುವವರು ಅರ್ಥಮಾಡಿಕೊಳ್ಳಬೇಕು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸು ವಂತೆ ನಾಗರಿಕರು ಕೋರಿದ್ದಾರೆ.

error: Content is protected !!