ದಾವಣಗೆರೆ,ಮಾ. 5 – ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಪಶು – ಪಕ್ಷಿಗಳು ಕುಡಿಯುವ ನೀರಿನ ಬಾನಿಗಳನ್ನು ವಿತರಿಸಲಾಯಿತು.
ಬಿಸಿಲು ಹೆಚ್ಚಾಗುತ್ತಿದ್ದು ಮನುಷ್ಯರೇ ಬಿಸಿಲಿನಿಂದ ತತ್ತರಿಸಿ ಹೋಗುವಂತಹ ಸಂದರ್ಭದಲ್ಲಿ ಮೂಕ ಪ್ರಾಣಿಗಳ ಗತಿಯೇನು? ಅವು ನೀರಿನ ದಾಹದಿಂದ ತತ್ತರಿಸಿ ಹೋಗುತ್ತವೆ. ದಯವಿಟ್ಟು ತಮ್ಮ ಮನೆಯ ಮುಂದೆ ಇಂತಹ ಬಾನಿಗಳನ್ನು ಇಟ್ಟು ಪಶು-ಪಕ್ಷಿಗಳ ನೀರಿನ ದಾಹ ತೀರಿಸಲು ಸಹಕರಿಸಿ. ಇಂತಹ ಸತ್ಕಾರ್ಯಕ್ಕೆ ಧನ ಸಹಾಯವಿತ್ತು ಸಹಕರಿಸಿದ ಕರುಣಾ ಟ್ರಸ್ಟಿನ ಎಲ್ಲಾ ಸಹೃದಯ ದಾನಿಗಳಿಗೆ ಟ್ರಸ್ಟ್ ಪರವಾಗಿ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಬಾನಿಗಳು ನಮ್ಮಲ್ಲಿ ಲಭ್ಯವಿದ್ದು, ತಮ್ಮ ಮನೆಯ ಮುಂದೆ ಇಡಲು ಇಚ್ಚಿಸುವವರು ಲಿಂಗರಾಜ್ (9538024422) ಅವರನ್ನು ಸಂಪರ್ಕಿಸಬಹುದು.