ಕೂಡ್ಲಿಗಿ, ಮೇ 1- ರೈತನಿಗೆ ಸಾಯಿ ಹೋಗು ಎಂದು ಹೇಳಿರುವ ಆಹಾರ ಪೂರೈಕೆ ಸಚಿವ ಉಮೇಶ್ ಕತ್ತಿ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ. ಗುರುಸಿದ್ಧನಗೌಡ, ಕಾರ್ಯದರ್ಶಿ ಟಿ. ಉಮೇಶ್, ಎಸ್ಟಿ ಸೆಲ್ ಜಿಲ್ಲಾಧ್ಯಕ್ಷ ಕಾವಲಿ ಶಿವಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ವಕ್ತಾರ ಮಹ್ಮದ್ ಜಿಲಾನ್, ಪ.ಪಂ ಸದಸ್ಯರಾದ ಶುಕೂರ್, ರಾಘವೇಂದ್ರ ಮತ್ತು ನಿತೀಶ್, ಹನುಮಂತ ಉಪಸ್ಥಿತರಿದ್ದರು.