ನಾಲೆ, ನದಿಯಲ್ಲಿ 2 ಶವಗಳ ಪತ್ತೆ

ಹರಿಹರ, ಮೇ 1- ಮಿಟ್ಲಕಟ್ಟೆ ಗ್ರಾಮದ ಆಕಾಶ್ ರೈಸ್‌ ಮಿಲ್ ಬಳಿ ಹಾದು ಹೋಗಿರುವ ಭದ್ರಾ ನಾಲೆ 10 ಉಪನಾಲೆಯಲ್ಲಿ ಸುಮಾರು 60-65 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವವು ತೇಲಿಬಂದಿದೆ.

ತಲೆಯಲ್ಲಿ ಕೂದಲು ಇರುವುದಿಲ್ಲ. ಮೃತದೇಹ ಸಂಪೂರ್ಣ ಕೊಳೆತು ಹೋಗಿರುವುದರಿಂದ ಚಹರೆ ಗುರುತುಗಳು ಕಂಡುಬಂದಿರುವುದಿಲ್ಲ. ಯಾವುದೇ ಬಟ್ಟೆ ಅಥವಾ ವಸ್ತುಗಳಾಗಲಿ ಇರುವುದಿಲ್ಲ. ಸಂಬಂಧಪಟ್ಟವರು ಮಾಹಿತಿ ನೀಡಲು  ಹರಿಹರ ಗ್ರಾಮಾಂತರ ಠಾಣೆ: 08192-272017, 9480803258 ಸಂಪರ್ಕಿಸುವುದು.

ಅಪರಿಚಿತ ವ್ಯಕ್ತಿಯ ಶವ ಪತ್ತೆ : ಹರಿಹರ ತಾಲ್ಲೂಕಿನ ದೀಟೂರು  ಗ್ರಾಮದ ಹತ್ತಿರ  ತುಂಗಭದ್ರಾ ನದಿಯಲ್ಲಿ ಸುಮಾರು 40 ವರ್ಷದ  ಅಪರಿಚಿತ ವ್ಯಕ್ತಿಯ ಶವ ತೇಲಿ ಬಂದಿದ್ದು, ವ್ಯಕ್ತಿಯ ಮಾಹಿತಿ  ತಿಳಿದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್  ಠಾಣೆಯನ್ನು ಸಂಪರ್ಕಿಸಲು ಕೋರಿದೆ. ಫೋನ್: 08192 272017, 9480803258.

error: Content is protected !!