ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕರ ದಿನಾಚರಣೆ

ದಾವಣಗೆರೆ, ಮಾ. 5- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಸಂಸ್ಥಾಪಕರ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಕಬ್ಸ್, ಬುಲ್‌ಬುಲ್, ಸ್ಕೌಟ್ಸ್ ರೋವರ್ಸ್ ಮಕ್ಕಳಿಗೆ ಕೋವಿಡ್-19 ಪೇಂಟಿಂಗ್ ಕಾಂಪಿಟೇಷನ್ ಮತ್ತು ದೇಶಭಕ್ತಿ ಗೀತೆಗಳ ಗೀತ ಗಾಯನದಲ್ಲಿ ಭಾಗವಹಿಸಿದ ಮಕ್ಕಳಿಗೆ ರಾಜ್ಯ ಸಂಸ್ಥೆಯಿಂದ ಬಂದಂತಹ ಪ್ರಶಸ್ತಿ ಪತ್ರ ಮತ್ತು ಬ್ಯಾಡ್ಜ್‌ಗಳನ್ನು ವಿತರಿಸಲಾಯಿತು.

ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಾಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ. ಚಿಗಟೇರಿ, ಜಿಲ್ಲಾ ಖಜಾಂಚಿ ಬಿ.ವಿ. ವಿಶ್ವನಾಥ್ ಸೇರಿದಂತೆ ರತ್ನ, ಸುಖವಾಣಿ, ನೂರುಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಎಲ್ಲಾ ತಂಡಗಳ ನಾಯಕರು ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

error: Content is protected !!