ಮಲೇಬೆನ್ನೂರು, ಮೇ 1- ಪಟ್ಟಣದ ರಾಜ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವ ಕಾರಣ ಚರಂಡಿ ನೀರು ಎಲ್ಲೆಂದರಲ್ಲಿ ಹರಿಯು ತ್ತಿದ್ದು, ಸಾರ್ವಜನಿಕರು ಪುರಸಭೆಯವರ ನಿರ್ಲ ಕ್ಷ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಬಸ್ ನಿಲ್ದಾಣದ ಪಕ್ಕದಲ್ಲಿರುವ ರಾಜ ಕಾಲುವೆಯಲ್ಲಿ ಕಸ ತುಂಬಿಕೊಂ ಡಿರುವುದರಿಂದ ಮತ್ತು ಚರಂಡಿ ಗಳ ನೀರು ಸರಾಗವಾಗಿ ಮುಂದೆ ಹೋಗದ ಕಾರಣ ದರ್ಗಾ ರಸ್ತೆಯಲ್ಲಿರುವ ಬಯಲು ಜಾಗದಲ್ಲಿ ಚರಂಡಿ ನೀರು ತುಂಬಿಕೊಂಡಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದ್ದು, ಪುರಸಭೆಯವರು ಕೂಡಲೇ ಗಮನ ಹರಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ಚರಂಡಿ ನೀರು ಚರಂಡಿ ಮೂಲಕವೇ ಪಟ್ಟಣದ ಹೊರಗಡೆ ಹೋಗುವಂತೆ ಮಾಡಿ ಎಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.
January 10, 2025