ದಾವಣಗೆರೆ, ಮಾ.4- ಜಿಲ್ಲಾ ಮುದ್ರಣಕಾರರ ಸಂಘದ ವತಿಯಿಂದ ಮುದ್ರಣ ದಿನಾಚರಣೆಯ ಅಂಗವಾಗಿ ಬಾಡಾ ಕ್ರಾಸ್‌ನಲ್ಲಿರುವ ಶ್ರೀ ವೀರೇ ಶ್ವರ ಪುಣ್ಯಾಶ್ರಮದಲ್ಲಿ ದಾಸೋಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ಸದಸ್ಯರ ಕುಟುಂಬಗಳಿಗೆ ಸ್ಪರ್ಧಾತ್ಮಕ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು ಮತ್ತು ಐದು ಹಿರಿಯ ಮುದ್ರಣ ಮಾಲೀಕರುಗಳಿಗೆ ಸನ್ಮಾನಿಸಿ, ಅಭಿನಂದಿಸಲಾಯಿತು.
ಸನ್ಮಾನಿತ ಹಿರಿಯ ಮುದ್ರಣ ಮಾಲೀಕರು : ಶ್ರೀಮತಿ ಲಲಿತಮ್ಮ, ಮಾಲೀಕರು ಶ್ರೀ ರುದ್ರೇಶ್ವರ ಪ್ರಿಂಟರ್ಸ್, ಆರ್.ಎಲ್. ಪ್ರಭಾಕರ್, ಮಾಲೀಕರು ಪವನ್ ಪ್ರಿಂಟರ್ಸ್, ಎ.ಎಂ. ಪ್ರಕಾಶ್, ಮಾಲೀಕರು ಬಸವೇಶ್ವರ ಮುದ್ರಣ, ಜಿ.ಎಂ. ನಾಗೇಂದ್ರಪ್ಪ, ಮಾಲೀಕರು ಸಂಗಮ ಪ್ರಿಂಟರ್ಸ್, ನಿರ್ಮಲ್ ನಾಗೇಂದ್ರ ಬಂಗೇರ, ಮಾಲೀಕರು ಪೂಜಾರ್ ಪ್ರಿಂಟರ್ಸ್ ಇವರುಗಳಿಗೆ ಸಂಘದಿಂದ ಸನ್ಮಾನಿಸಿ, ಗೌರವಿಸಲಾಯಿತು.