ಹರಿಹರ, ಮೇ 2- ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮ ವಹಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಎನ್.ಹೆಚ್. ಶ್ರೀನಿವಾಸ್ ಸ್ನೇಹಿತರ ಬಳಗದ ವತಿಯಿಂದ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಬೆಳಗ್ಗೆ ಉಪಹಾರ ಮತ್ತು ಮಧ್ಯಾಹ್ನದಲ್ಲಿ ಊಟದ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಡಾ. ಚಂದ್ರಮೋಹನ್, ಸಿಪಿಐ ಸತೀಶ್ ಕುಮಾರ್, ಪಿಎಸ್ಐ ಸುನಿಲ್ ಬಸವರಾಜ್ ತೆಲಿ, ಎನ್.ಹೆಚ್. ಶ್ರೀನಿವಾಸ್ ನಂದಿಗಾವಿ. ಸುಚೇತ್, ಸಿಬ್ಬಂದಿಗಳಾದ ನಿಂಗಪ್ಪ, ಸತೀಶ್, ಸುಜಾತ ನಾಯ್ಕ್, ಸುಧಾ ಸಳಾಕೆ, ದೇವರಾಜ್, ಮಂಜುನಾಥ್, ದ್ವಾರಕೀಶ್, ಸಂತೋಷ್ ಇನ್ನಿತರರು ಹಾಜರಿದ್ದರು.