ದಾವಣಗೆರೆ, ಮಾ. 2 – ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ 38ನೇ ವಾರ್ಡ್ನ ಬಾಯ್ಸ್ ಹಾಸ್ಟೆಲ್ ರಸ್ತೆಯಲ್ಲಿ ಯು.ಜಿ.ಡಿ. ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯ ಜಿ.ಎಸ್. ಮಂಜುನಾಥ ಗಡಿಗುಡಾಳ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಾರ್ಡ್ನ ನಾಗರಿಕರು ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಕಾಮಗಾರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಎಸ್. ಸತೀಶ್, ಆರ್.ಜಿ. ಧನೇಶ್, ವಿವೇಕಾನಂದ ಕರಿಗೌಡ್ರು, ಪ್ರಮೋದ್, ಪ್ರಜ್ವಲ್, ಪ್ರಕಾಶ್, ಜಿ.ಎಸ್. ಮನು, ಜಿ.ಎಸ್. ಮನೀಶ್, ನಿಖಿಲ್ ಎಂ., ನೀಲ ಕಂಠಪ್ಪ, ಕೆ.ಎಂ. ಬಸವರಾಜ್, ಕೆ.ಬಿ. ಮಂಜುನಾಥ್, ಉಮೇಶ್, ಮಂಜು ಮುಂತಾದವರು ಪಾಲ್ಗೊಂಡಿದ್ದರು.
ಹಲವು ಜನೋಪಯೋಗಿ ಯೋಜನೆಗಳನ್ನು ಕೈಗೆತ್ತಿಕೊಂಡು ತ್ವರಿತವಾಗಿ ಕಾರ್ಯರೂಪಕ್ಕೆ ತರುತ್ತಿ ರುವ ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್ ಅವರಿಗೆ ನಾಗರಿಕರು ಪ್ರಶಂಸಿಸಿ ಸನ್ಮಾನಿಸಿದರು.