ಹರಪನಹಳ್ಳಿ, ಏ.30- ಕೋವಿಡ್ ನಿಯಂತ್ರಣಕ್ಕೆ ಗ್ರಾಮೀಣ ಭಾಗದಲ್ಲಿ ರಚನೆ ಮಾಡಿರುವ ಟಾಸ್ಕ್ಪೋರ್ಸ್ ಸಮಿತಿಗಳಂತೆ ಪಟ್ಟಣದಲ್ಲೂ ವಾರ್ಡ್ವಾರು ಸಮಿತಿಗಳನ್ನು ರಚನೆ ಮಾಡಬೇಕು ಎಂದು ತಹಶೀಲ್ದಾರ ಎಲ್. ಎಂ. ನಂದೀಶ್ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ ಮಂಜುನಾಥ ಇಜಂತಕರ್ ಅವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿಯಂ ತ್ರಣಕ್ಕೆ ವಾರ್ಡ್ವಾರು ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಲು ನಿರ್ಣಯ ಕೈಗೊಂಡ ನಂತರ ಮಾತನಾಡಿ, ಆಯಾ ವಾರ್ಡ್ಗಳ ಸದಸ್ಯರೇ ಆಯಾ ವಾರ್ಡ್ಗಳ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಅಂಗನವಾಡಿ ಕಾರ್ಯ ಕರ್ತರು, ಬೀಟ್ ಪೊಲೀಸರು, ಸಮಾಜಸೇವಕರು, ಎಎನ್ಎಂ ಹೀಗೆ ಸಮಿತಿ ಸದಸ್ಯರುಗಳು ಇರುತ್ತಾರೆ ಎಂದರು.
ಪುರಸಭಾ ಸದಸ್ಯ ಕಿರಣ್ ಶಾನ್ಭಾಗ್ ಕೊರೊನಾ ಸೋಂಕಿತರ ಬಗ್ಗೆ ಆಯಾ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಕೋರಿದರು. ಮತ್ತೊಬ್ಬ ಸದಸ್ಯ ಜಾಕೀರ್ ಹುಸೇನ್ ಮಾತನಾಡಿ, 14 ದಿನ ಕ್ವಾರಂಟೈನ್ ಆದವರಿಗೆ ಸರ್ಕಾರದಿಂದ ಆಹಾರ ಒದಗಿಸಬೇಕು ಎಂದು ಕೋರಿದರು. ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಂಗಲಿ ಅಂಜಿನಪ್ಪ ಜನತಾ ಕರ್ಫ್ಯೂ ಮುಗಿಯುವವರೆಗೂ ಬೀದಿ ಬದಿ ವ್ಯಾಪಾರಿಗಳ ಬಳಿ ಜಕಾತಿ ವಸೂಲಿ ಮಾಡಬಾರದು ಎಂದು ಮನವಿ ಮಾಡಿದರು.
ಪುರಸಭಾ ಉಪಾಧ್ಯಕ್ಷೆ ನಿಟ್ಟೂರು ಭೀಮವ್ವ, ಸದಸ್ಯರುಗಳಾದ ಭರತೇಶ, ಮಂಜುನಾಥ, ವಾಗೀಶ, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ, ಸಮುದಾಯ ಸಂಘಟನೆ ಅಧಿಕಾರಿ ಲೋಕನಾಯ್ಕ, ಇಂಜಿನಿಯರ್ ಸಿದ್ದೇಶ, ಕಂದಾಯ ಅಧಿಕಾರಿ ಸೇರಿದಂತೆ, ಇನ್ನಿತರರು ಪಾಲ್ಗೊಂಡಿದ್ದರು.