ಎಲ್ಲರಿಗೂ ಸಿಗಬೇಕಿದೆ ಸಮಗ್ರ ಮೀಸಲಾತಿ ಅವಕಾಶ

ಆಗಿದ್ದರೆ ಪರಿಸ್ಥಿತಿ ತಿಳಿಯಾಗುತ್ತಿತ್ತೋ ಏನೋ. ಆದರೆ, ರಾಜಕಾರಣಿಗಳಿಗೆ ಅಷ್ಟರಿಂದ ಸಮಾಧಾನವಾಗಬೇಕಲ್ಲ? ಹುದ್ದೆಗಳ ಜೊತೆಗೆ ಸಂಪನ್ಮೂಲಗಳಲ್ಲೂ ಮೀಸಲಾತಿ ತಂದರು. ಎಲ್ಲ ಅನುದಾನಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಉದ್ದೇಶದಿಂದ ಎಸ್‌ಸಿಪಿ – ಟಿಎಸ್‌ಪಿ ಪದ್ಧತಿ ಬಂತು. ಮೊನ್ನೆಯಷ್ಟೇ ಹರಿಹರದ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಟ್‌ಗಳು ಖಾಲಿ ಬಿದ್ದಿದ್ದರೂ ಯಾರೂ ಬೇಕೆಂದು ಕೇಳುತ್ತಿಲ್ಲ. ಅದೇ ಎಸ್‌ಸಿ – ಎಸ್‌ಟಿ ಪ್ಲಾಟ್‌ಗಳಿಗೆ ಬೇಡಿಕೆ ಇದ್ದು, ಇನ್ನಷ್ಟು ಪ್ಲಾಟ್‌ಗಳನ್ನು ಕೇಳಲಾಗುತ್ತಿದೆ. ಕಾರಣ ಪ್ಲಾಟ್‌ಗಳಿಗೆ ಶೇ.90ರವರೆಗೂ ಸಬ್ಸಿಡಿ ಇರುವ ಜೊತೆಗೆ, ನಂತರ ಘಟಕಗಳ ಸ್ಥಾಪನೆಗೂ ಸಬ್ಸಿಡಿ ಇರುವುದು.ಇದೊಂದು ಉದಾಹರಣೆ ಮಾತ್ರ. ಇಂತಹ ಹತ್ತು ಹಲವು ಸೌಲಭ್ಯಗಳು ಮೀಸಲಾತಿಯಿಂದ ಲಭ್ಯ.

ಮೀಸಲಾತಿಗೇ ಸಮಾಧಾನವಾಗದು : ಮನೆ, ರಸ್ತೆಗಳಿಂದ ಹಿಡಿದು ಪುಸ್ತಕ, ಕಂಪ್ಯೂಟರ್‌ಗಳವರೆಗೂ ಆರ್ಥಿಕ ಮೀಸಲಾತಿಯ ಛಾಯೆ ಹರಡಿದೆ. ಇದೇ ಕಾರಣಕ್ಕಾಗಿ ಈಗಾಗಲೇ ಮೀಸಲಾತಿ ವರ್ಗದಲ್ಲಿರುವವರೂ ಸಹ ಎಸ್‌ಸಿ – ಎಸ್‌ಟಿಗೆ ಜಿಗಿಯುವ ಹೋರಾಟದಲ್ಲಿದ್ದಾರೆ. 

ಇಷ್ಟು ಸಾಲದು ಎಂಬಂತೆ ಕೆಲವರು ಖಾಸಗಿ ವಲಯದಲ್ಲೂ ಮೀಸಲಾತಿ ಕೊಡಿ ಎಂಬ ಬೇಡಿಕೆಯನ್ನು ಸಣ್ಣಗೆ ಮುಂದಿಡುತ್ತಿದ್ದಾರೆ. ಅದೇನಾದರೂ ಜಾರಿ ಆಯಿತು ಎಂದರೆ, ಭಾರತ ಸಂಘರ್ಷ – ಹೋರಾಟದ ಹೊಸ ಪರ್ವವನ್ನೇ ಕಾಣುವುದರಲ್ಲಿ ಆಶ್ಚರ್ಯವಿಲ್ಲ.

ಅಸ್ಪಷ್ಟ ಫಲಾನುಭವಿಗಳು : ಮೀಸಲಾತಿ ಯಾರಿಗೆ ಕೊಡಬೇಕು ಎಂಬುದು ಸ್ವಾತಂತ್ರ್ಯದ ಸಮಯದಲ್ಲಿ ಸ್ಪಷ್ಟವಾಗಿತ್ತು. ಆಗ ಬಹುತೇಕ ಪರಿಶಿಷ್ಟರು ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ವಂಚಿತರಾಗಿದ್ದರು. ಹೀಗಾಗಿ ಪರಿಶಿಷ್ಟರಲ್ಲಿ ಯಾರಿಗೇ ನೆರವು ಕೊಟ್ಟರೂ ಅವರು ಅರ್ಹರೇ ಆಗಿರುತ್ತಿದ್ದರು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಉದ್ಯಮಿಗಳು, ಉಪನ್ಯಾಸಕರು, ರಾಜಕಾರಣಿಗಳಿಂದ ಹಿಡಿದು ರಾಷ್ಟ್ರಪತಿಯವರೆಗೂ ಪರಿಶಿಷ್ಟರಿದ್ದಾರೆ. ಇತರೆ ಮೀಸಲಾತಿ ವರ್ಗದವರೂ ಎಲ್ಲ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇಷ್ಟಾದರೂ ಮೀಸಲಾತಿ ಅಬಾಧಿತವಾಗಿದೆ. ಇದರಿಂದ ಮೀಸಲಿಗೆ ಅರ್ಹರು ಯಾರು ಎಂಬುದೂ ಅಸ್ಪಷ್ಟವಾಗಿದೆ.

ಹೀಗಿರುವಾಗ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಮೀಸಲಾತಿ ಹಾಗೂ ಸೌಲಭ್ಯ ಎಂಬ ವಾದ ಹೋಗಿ, ಜಾತಿ ಬಲ ಹಾಗೂ ಹೋರಾಟದ ಕೆಚ್ಚಿನವರಿಗೆ ಮೀಸಲಾತಿ ಎಂಬ ಪರಿಸ್ಥಿತಿ ಉಂಟಾಗಿದೆ. 

ಸಮರ್ಪಕ ಚರ್ಚೆಯಾಗಿಲ್ಲ : ಮೀಸಲಾತಿಯ ಕುರಿತು ಎಂದೋ ಸಮಗ್ರ ಚರ್ಚೆ ಆಗಬೇಕಿತ್ತು. ಆದರೆ, ಅಂತಹ ಸಮಗ್ರ ದೃಷ್ಟಿಕೋನದ ರಾಜಕಾರಣಿಗಳ ಬರವಿದೆ. ಹೀಗಾಗಿ ಅಂತಹ ಚರ್ಚೆಗಳು ಶಾಸನಸಭೆಗಳಲ್ಲಿ ಇತ್ತೀಚೆಗೆ ಆಗಿಯೇ ಇಲ್ಲ ಎನ್ನಬಹುದು. ಈಗೇನಿದ್ದರೂ ಮೂಗಿಗೆ ತುಪ್ಪ ಹಚ್ಚಿ ಜಾತಿಗಳನ್ನು ಬಲಗೊಳಿಸುವ ಧಾವಂತವೇ ಹೆಚ್ಚಾಗಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಮೀಸಲಾತಿ ನ್ಯಾಯಕ್ಕಿಂತ ಮೀಸಲಾತಿಯ ರಾಜಕೀಯವೇ ವಿಜೃಂಭಿಸುವ ದಿನಗಳನ್ನು ಕಂಡರೆ ಅಚ್ಚರಿ ಪಡಬೇಕಿಲ್ಲ. 

ಸಮಗ್ರ ಮೀಸಲಾತಿ : ಮೊನ್ನೆಯಷ್ಟೇ ಅನಾಥರಾಗಿರುವ ಮುಂದುವರೆದ ಜಾತಿಯ ಮಕ್ಕಳನ್ನು ಒ.ಬಿ.ಸಿ. ಎಂದು ಪರಿಗಣಿಸಬೇಕೆಂಬ ವಾದ ಕೇಳಿ ಬಂದಿತ್ತು. ಕೇವಲ ಜಾತಿ, ಲಿಂಗ, ಭಾಷೆ, ಜನ್ಮಸ್ಥಳ, ಆರ್ಥಿಕತೆ, ಅಂಗವೈಕಲ್ಯ ಇತ್ಯಾದಿಗಳಲ್ಲಿ ಒಂದು ಅಂಶವನ್ನಷ್ಟೇ ಪರಿಗಣಿಸಿ ಮೀಸಲಾತಿ ನಿರ್ಧರಿಸುವುದು ಸೂಕ್ತವಾಗದು. ಬದಲಾದ ಕಾಲದಲ್ಲಿ ವ್ಯಕ್ತಿಯ ಹಿಂದುಳಿಯುವಿಕೆಗೆ ಹಲವಾರು ಅಂಶಗಳು ಕಾರಣವಾಗುತ್ತವೆ ಎಂಬುದನ್ನು ಪರಿಗಣಿಸಬೇಕಿದೆ.

ಮೀಸಲಾತಿ ವಿಷಯ ಬಂದಾಗ ದೇಶದ ಎಲ್ಲರನ್ನೂ ಒರೆಗೆ ಹಚ್ಚಿ ತೂಗಬೇಕು. ಜಾತಿ, ಆರ್ಥಿಕತೆ, ಭಾಷೆ, ಲಿಂಗ, ಅಂಗವೈಕಲ್ಯ ಹೀಗೆ ಹಲವಾರು ವಿಷಯಗಳಲ್ಲಿ ಪ್ರತಿ ವ್ಯಕ್ತಿ ಎಷ್ಟು ಹಿಂದುಳಿದಿದ್ದಾನೆ ಎಂಬುದನ್ನು ಪರಿಗಣಿಸಬೇಕು.

ಜಾತಿ ಜೊತೆಗೆ ಆರ್ಥಿಕತೆಯನ್ನೂ ಪರಿಗಣಿಸಬೇಕು. ಜಾತಿ ಮೀಸಲಾತಿಗಳು ಆಯಾ ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಮೊದಲು ಸಲ್ಲಬೇಕು. ಅದೇ ರೀತಿ ಸಾಮಾಜಿಕವಾಗಿ ಹಿಂದುಳಿಯಲು ಕಾರಣವಾದ ಎಲ್ಲ ಅಂಶಗಳಿಗೆ ಕೃಪಾಂಕದ ರೀತಿ ಎಣಿಕೆ ಹಾಕಿ ಅತಿ ಹೆಚ್ಚು ಅಂಕ ಪಡೆದವರಿಗೆ ಮೀಸಲಾತಿ ಕಲ್ಪಿಸುವ ಸಾಧ್ಯತೆ ಬಗ್ಗೆ ಯೋಚಿಸಬೇಕಿದೆ.  ದೇಶದ ಎಲ್ಲ ವಂಚಿತರೂ ಆಗ ಮೀಸಲಾತಿ ವ್ಯಾಪ್ತಿಗೆ ಬರುವುದಷ್ಟೇ ಬರಲು ಸಾಧ್ಯ. ಹಾಗಾದಲ್ಲಿ ಸಂಘರ್ಷಗಳೂ ನಿಲ್ಲಬಹುದೇನೋ?


ಎಸ್.ಎ. ಶ್ರೀನಿವಾಸ್‌
[email protected]

 

error: Content is protected !!