ದಾವಣಗೆರೆ, ಮಾ.2- ಮನೆಗೆ ಕನ್ನ ಹಾಕಿರುವ ಕಳ್ಳರು 12 ಗ್ರಾಂ ತೂಕದ 48 ಸಾವಿರ ಮೌಲ್ಯದ ಬಂಗಾರದ ಸರ, 5 ಗ್ರಾಂ ತೂಕದ 20 ಸಾವಿರ ಮೌಲ್ಯದ ಬಂಗಾರದ ಎರಡು ಕಿವಿಯೋಲೆಗಳು ಹಾಗೂ 15 ಸಾವಿರ ನಗದು ದೋಚಿದ್ದಾರೆ. ನಿಟ್ಟುವಳ್ಳಿ ವಾಸಿ, ತೃತೀಯ ಲಿಂಗಿಯಾದ ಕುಮಾರಿ ಜಾಹ್ನವಿ ಅವರು ಇದೇ ಫೆ.28 ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋದ ಸಂದರ್ಭದಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ.
December 26, 2024