ಜಿಲ್ಲೆಯಲ್ಲಿಂದು 3 ಸಾವು, 196 ದೃಢ

ಐದು ದಿನದಲ್ಲೇ 7  ಸಾವು ಜನರಲ್ಲಿ ಹೆಚ್ಚಿದ ಆತಂಕ

ದಾವಣಗೆರೆ, ಏ.28- ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಇಂದು ಮೂವರು ಸಾವನ್ನಪ್ಪಿದ್ದು, 196 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟ ಬಗ್ಗೆ ವರದಿ ಯಾಗಿದೆ. ಏ.24ರಿಂದ ಇಲ್ಲಿಯವರೆಗೆ ಕೇವಲ ಐದು ದಿನಗಳಲ್ಲಿ ಈವರೆಗೆ 7 ಸಾವುಗಳು ಸಂಭವಿಸಿವೆ. 

ದಾವಣಗೆರೆ ತಾಲ್ಲೂಕಿನಲ್ಲಿ 129, ಹರಿಹರ 14, ಜಗಳೂರು 10, ಚನ್ನಗಿರಿ 20, ಹೊನ್ನಾಳಿ 11 ಹಾಗೂ ಹೊರ ಜಿಲ್ಲೆಯ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 156 ಜನರು ಸೋಂಕು ಮುಕ್ತರಾಗಿ ಬಿಡುಗಡೆಯಾಗಿ ದ್ದಾರೆ. ನಗರದ ಎಸ್.ಎಸ್. ಹೈಟೈಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರಿಹರದ ಇಂದಿರಾ ನಗರದ 43 ವರ್ಷದ ಮಹಿಳೆ, ದಾವಣಗೆರೆ ಜಯನಗರದ 46 ವರ್ಷದ ಪುರುಷ, ನಿಜಲಿಂಗಪ್ಪ ಬಡಾವಣೆಯ 78 ವರ್ಷದ ಮಹಿಳೆ ಸೋಂಕಿನಿಂದ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1624ಕ್ಕೆ ಏರಿಕೆಯಾಗಿದ್ದು,  ಇಲ್ಲಿಯವರೆಗೆ 271 ಜನರು ಸಾವನ್ನಪ್ಪಿದ್ದಾರೆ.

error: Content is protected !!