ಕೊಕ್ಕನೂರು : ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

ಮಲೇಬೆನ್ನೂರು, ಮಾ.2- ಕೊಕ್ಕನೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೆಚ್. ರಾಮಚಂದ್ರಪ್ಪ ಮತ್ತು ಉಪಾಧ್ಯಕ್ಷರಾಗಿ ಗಡಗಿ ರಾಮಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಹೆಚ್. ಕೊಟ್ರಪ್ಪ, ಸಂಘದ ಮಾಜಿ ಅಧ್ಯಕ್ಷ ಡಿ. ಸೋಮಶೇಖರ್, ಹೆಚ್. ನಾಗರಾಜ್, ದಾಸರ ನಾಗರಾಜಪ್ಪ, ಡಿ.ಎಲ್. ನಾಗರಾಜ್, ಕಡೂರು ಭರಮಗೌಡ ಹಾಗೂ ಸಂಘದ ನಿರ್ದೇಶಕರು ಹಾಜರಿದ್ದರು.

ಸಹಕಾರಿ ಅಭಿವೃದ್ಧಿ ಅಧಿಕಾರಿ ಎಸ್.ಜಿ. ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಘದ ಕಾರ್ಯದರ್ಶಿ ಡಿ. ಶಾಂತಪ್ಪ ಸ್ವಾಗತಿಸಿದರು.

error: Content is protected !!