ದಾವಣಗೆರೆ, ಜು. 20- ಜಿಲ್ಲೆಯಲ್ಲಿ ಹೊಸದಾಗಿ ನೋಂದಣಿಯಾದ ವಿದ್ಯಾರ್ಥಿಗಳು 17502 ಹಾಗೂ 2404 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 19906 ವಿದ್ಯಾರ್ಥಿಗಳೆಲ್ಲರೂ ಉತ್ತೀರ್ಣರಾಗಿದ್ದಾರೆ ಎಂದು ಪಿಯು ಡಿಡಿಪಿಐ ರಾಜು ಅವರು ಜನತವಾಣಿಗೆ ತಿಳಿಸಿದ್ದಾರೆ.
ಕಲಾ ವಿಭಾಗದ 5645 ವಿದ್ಯಾರ್ಥಿಗಳ ಪೈಕಿ 4846 ಹೊಸಬರು, 799 ಪುನರಾವರ್ತಿತ. ವಾಣಿಜ್ಯ ವಿಭಾಗದಲ್ಲಿ ಒಟ್ಟು 5276 ವಿದ್ಯಾರ್ಥಿಗಳ ಪೈಕಿ ಹೊಸಬರು 4534 ಹಾಗೂ 742 ಪುನರಾವರ್ತಿತ ಮತ್ತು ವಿಜ್ಞಾನ ವಿಭಾಗದ 8985 ವಿದ್ಯಾರ್ಥಿಗಳ ಪೈಕಿ 8122 ಹೊಸಬರು ಹಾಗೂ 863 ಪುನರಾ ವರ್ತಿತ ವಿದ್ಯಾರ್ಥಿಗಳೆಲ್ಲಾ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಗಳಿಗೆ ಈ ಫಲಿತಾಂಶ ತೃಪ್ತಿ ತರದೇ ಇದ್ದರೆ ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನವಾಗಿದೆ. ಅವರಿಗೆ ಇದೇ ಆಗಸ್ಟ್ 21 ರಿಂದ ಸೆಪ್ಟೆಂಬರ್ 3ರ ಒಳಗೆ ಪರೀಕ್ಷೆ ನಡೆಸಲಾಗುತ್ತಿದೆ. ಇವರೊಟ್ಟಿಗೆ ಖಾಸಗಿ ಅಭ್ಯರ್ಥಿಗಳಿಗೂ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಂತರ ಬರುವ ಫಲಿತಾಂಶವೇ ಅಂತಿಮವಾಗಿರುತ್ತದೆ ಎಂದು ಅವರು ಹೇಳಿದರು.